Spread the love

ಸಂಯುಕ್ತ ಟೈಮ್ಸ್, ನವದೆಹಲಿ: ಹಿಂದುಳಿದ ಜಾತಿಗಳಲ್ಲಿದ್ದುಕೊಂಡು ಮೀಸಲಾತಿ ಲಾಭ ಪಡೆದವರು ಮೀಸಲು ಕೆಟಗರಿಯಿಂದ ಹೊರಬಂದು ಇನ್ನಷ್ಟು ಹಿಂದುಳಿದ ಜನರಿಗೆ ಮೀಸಲಾತಿಯ ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

SC ST ಸಮುದಾಯಕ್ಕೆ ರಾಜ್ಯ ಸರ್ಕಾರಗಳು ಒಳಮೀಸಲಾತಿ ನೀಡುವ ವಿಷಯದ ಕುರಿತು ಪರಿಶೀಲನೆ ನಡೆಸುತ್ತಿರುವ ಸುಪ್ರೀಂನ ಸಂವಿಧಾನ ಪೀಠ ವಿಚಾರಣೆ ವೇಳೆ ಈ ಅಭಿಪ್ರಾಯ ತಿಳಿಸಿದೆ.

ನಿರ್ದಿಷ್ಟ ಸಮುದಾಯದಲ್ಲಿರುವ ಒಳಪಂಗಡಗಳು ಮೀಸಲಾತಿ ಲಾಭ ಪಡೆದು ಮುಂದೆ ಬಂದಿದ್ದರೆ ಅಂತಹವರು ಅದರಿಂದ ಹೊರಬಂದು ಸಾಮಾನ್ಯ ವರ್ಗದವರೊಂದಿಗೆ ಸ್ಪರ್ಧೆ ಮಾಡಬೇಕು. ಇದರಿಂದ ತಮ್ಮದೇ ವರ್ಗದ ಹಿಂದುಳಿದವರಿಗೆ ಅನುಕೂಲವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಪರಿಶಿಷ್ಟ  ಜಾತಿ ಹಾಗೂ ಪಂಗಡಗಳಲ್ಲಿರುವ ಪ್ರತಿಯೊಬ್ಬರು ಅದೇ ಜಾತಿ ಹಾಗೂ ಪಂಗಡಕ್ಕೆ ಸೇರಿದ ಕಾರಣ ಅವರೆಲ್ಲ ಒಂದೇ ಎಂದು ಹೇಳಬಹುದು. ಈ ವಿಚಾರವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಾನಮಾನಗಳಲ್ಲಿ ನೋಡಿದಾಗ ಎಲ್ಲರೂ ಒಂದೇ ಎಂದು ಹೇಳಲು ಸಾಧ್ಯವಿಲ್ಲ. ಈ ಅಸಮಾನತೆ ವ್ಯಕ್ತಿಯಿಂದ ವ್ಯಕ್ತಿಗೆ, ಜಾತಿಯಿಂದ ಜಾತಿಗೆ ಭಿನ್ನವಾಗಿರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

Leave a Reply

Your email address will not be published. Required fields are marked *

You missed

error: Content is protected !!