ಗೋಕಾಕ: ಸಚೀನ ಹಣಮಂತರಾವ ಘೋರ್ಪಡೆ ಅವರನ್ನು ದಿನಾಂಕ: 15/03/2026 ರಂದು ಮಧ್ಯರಾತ್ರಿ ಸುಮಾರು 12.30 ಗಂಟೆಗೆ ಖತೀಬ ಮಸೀದ ಹತ್ತಿರ ಆರು ಆರೋಪಿಗಳು ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆ ಮಾಡಿ ಕೊರಳಲ್ಲಿದ್ದ 16 ಗ್ರಾಂ ತೂಕದ ಗೋಲ್ಡ್ ಚೈನ್ ಮತ್ತು ಲಾಕೇಟನ್ನು ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದರು.

ಈ ಕುರಿತು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 92/2026 ಕಲಂ: 310(2), 118(1), 126(2) 190 BNS-2023 ರಡಿ FIR ದಾಖಲಾಗಿತ್ತು.
ಬೆಳಗಾವಿ SP ರಾಮರಾಜನ್. ಕೆ ಅವರು ಗೋಕಾಕ ಸಿಪಿಐ ಸುರೇಶಬಾಬು ಆರ್.ಬಿ ಮತ್ತು ಗೋಕಾಕ ಶಹರ ಠಾಣೆಯ ಪಿಎಸ್ಐ ಕಿರಣ ಮೋಹಿತೆ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಬೆಳಗಾವಿ ASP ರಾಮಗೊಂಡ ಬಸರಗಿ ಮತ್ತು ಗೋಕಾಕ ಉಪವಿಭಾಗ DySP ರವಿ ನಾಯ್ಕ ಇವರ ಮಾರ್ಗದರ್ಶನದಲ್ಲಿ ದಿನಾಂಕ: 20/03/2026 ರಂದು 1) ಆಕಾಶ ಮಹಾದೇವ ತಳವಾರ, 2) ರಾಮಸಿದ್ದ ಮಾರುತಿ ತೋಳ, 3) ರಿತೇಶ ಶಿವಾಜಿ ಫಕೀರೆ, 4) ನಾಗರಾಜ ರಾಮಪ್ಪಾ ತೋಳ, 5) ಗೋಪಾಲ ಕಲ್ಲಪ್ಪಾ ತೋಳಿ 6) ಅಪ್ರಾಪ್ತ ಬಾಲಕ ಮತ್ತು ಆರೋಪಿಗಳಿಗೆ ಬಚ್ಚಿಟ್ಟುಕೊಳ್ಳಲು ಆಶ್ರಯ ನೀಡಿದ್ದ ಬಸಳಿಗುಂದಿ ಗ್ರಾಮದ ಸಿದ್ದಪ್ಪಾ ಮಾಯಪ್ಪಾ ಕುರುಬನ್ನವರ ಸೇರಿದಂತೆ ಒಟ್ಟು ಏಳು ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಸದರಿ ಪ್ರಕರಣದ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕಾಕ ಸಿಪಿಐ ಸುರೇಶಬಾಬು ಆರ್ ಬಿ, ಗೋಕಾಕ ಶಹರ ಠಾಣೆಯ ಪಿಎಸ್ಐ ಕಿರಣ ಮೋಹಿತೆ ಹಾಗೂ ಸಿಬ್ಬಂದಿಗಳಾದ ಆರ್.ಬಿ.ಹಡಪದ ಎ.ಎಸ್.ಐ. ಕೆ.ಎನ್.ಈಳಿಗೇರ್, ಜೆ.ಎಚ್.ಗುಡ್ಲಿ, ಪಿ.ಎಮ್.ಗಸ್ತಿ. ಎಮ್.ಆರ್ ಅಂಬಿ, ಎಸ್.ಎಮ್ ಮಂಗಿ, ಮಂಜುನಾಥ ಹುಚ್ಚಗೌಡರ, ಐ.ವಿ.ಘಂಟಿ, ಮಂಜುನಾಥ ನಾಯಿಕ ಮತ್ತು ಸಚೀನ ಪಾಟೀಲ ಟೆಕ್ನಿಕಲ್ ಸೆಲ್ ಬೆಳಗಾವಿ ಇವರ ಕಾರ್ಯವನ್ನು ಬೆಳಗಾವಿ SP ರಾಮರಾಜನ್ ಅವರು ಶ್ಲಾಘಿಸಿದ್ದಾರೆ.

