Spread the love

ಗೋಕಾಕ:  ಮೊಬೈಲ್ ಕಳೆದುಕೊಂಡವರು CEIR ಪೋರ್ಟಲನಲ್ಲಿ ದೂರು ದಾಖಲಿಸಿದ್ದರ ಹಿನ್ನಲೆಯಲ್ಲಿ ಕಳೆದುಹೋಗಿದ್ದ ಮೊಬೈಲಗಳನ್ನು ಕೇವಲ 8 ದಿನಗಳಲ್ಲಿ ಪತ್ತೆ ಹಚ್ಚಿ ಘಟಪ್ರಭಾ ಪೊಲೀಸ್ ಠಾಣೆಯ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾದ ಸಿಪಿಐ ಎಚ್.ಡಿ. ಮುಲ್ಲಾ ಅವರು ಶನಿವಾರ 15 ಮೊಬೈಲಗಳನ್ನು ಮರಳಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಎಚ್.ಡಿ. ಮುಲ್ಲಾ ಅವರು ಮೊಬೈಲ್ ಕಳೆದುಹೋದಲ್ಲಿ ಸಾರ್ವಜನಿಕರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.  ವಿಶೇಷವಾಗಿ KSP App ಹಾಗೂ CEIR portal ಮೂಲಕ ‘E-Lost’ ದೂರು ದಾಖಲಿಸುವುದು ಅತ್ಯಂತ ಪರಿಣಾಮಕಾರಿ ಕ್ರಮ ಮತ್ತು ಇದರಿಂದ ಮೊಬೈಲ್ ದುರ್ಬಳಕೆಯನ್ನು ತಡೆಯುವುದರ ಜೊತೆಗೆ ಅದನ್ನು ಪತ್ತೆಹಚ್ಚುವ ಕಾರ್ಯವೂ ಸುಲಭವಾಗುತ್ತದೆ ಎಂದು ಅವರು ಹೇಳಿದರು.

ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವಲ್ಲಿ ತಮ್ಮ ಬದ್ಧತೆಯನ್ನು ಘಟಪ್ರಭಾ ಪೊಲೀಸರು ಪುನರುಚ್ಚರಿಸಿದ್ದಾರೆ ಆದ್ದರಿಂದ ಘಟಪ್ರಭಾ ಪೊಲೀಸರ ಈ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಮರಳಿ ಹಸ್ತಾಂತರಿಸುವ ಸಂದರ್ಭದಲ್ಲಿ ಘಟಪ್ರಭಾ ಪೊಲೀಸ್ ಠಾಣೆಯ ಸಿಪಿಐ ಎಚ್.ಡಿ. ಮುಲ್ಲಾ ಪೊಲೀಸ್ ಸಿಬ್ಬಂದಿಗಳಾದ ASI ಪಿ. ಎಂ. ಪಾಟೀಲ, ರಾಜು ಧುಮಾಳೆ, ಬಿ. ಎಸ್. ನಾಯಿಕ, ರಾಮಕೃಷ್ಣ ಗಿಡ್ಡಪ್ಪಗೋಳ, ಶ್ರೀಕಾಂತ ದೇವರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!