Spread the love

ಗೋಕಾಕ:   ಗೋಕಾಕ ಶಹರ ಠಾಣೆಯ ಪೊಲೀಸರು ಬೈಕ್ ಕಳ್ಳರ ಜಾಲವೊಂದನ್ನು ಬೇಧಿಸಿದ್ದು, ಕಳ್ಳತನವಾಗಿದ್ದ ಬರೋಬ್ಬರಿ 5 ಲಕ್ಷ ರೂ. ಮೌಲ್ಯದ 15 ಬೈಕ್‌ಗಳನ್ನು ಜಪ್ತಿ ಮಾಡಿ ಬೈಕ್ ಕಳ್ಳರನ್ನು  ಹೆಡೆಮುರಿ ಕಟ್ಟಿದ್ದಾರೆ.

ಗೋಕಾಕ ಶಹರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಕುಖ್ಯಾತ ಬೈಕ್ ಕಳ್ಳರಾದ ಪರಶುರಾಮ ಹಣಬರಟ್ಟಿ (22) ಮತ್ತು ಲಗಮಣ್ಣ ಮಲ್ಲನ್ನವರ (18) ಎಂಬುವವರನ್ನು ಬಂಧಿಸಿದ್ದಾರೆ. 

ಫೆಬ್ರವರಿ 5 ರಂದು ಗೋಕಾಕ ನಗರದಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆಯ ಬೆನ್ನುಬಿದ್ದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.  ವಿಚಾರಣೆ ವೇಳೆ ಈ ಇಬ್ಬರೂ ಆರೋಪಿಗಳು ಗೋಕಾಕ, ಯಮಕನಮರಡಿ, ಹುಕ್ಕೇರಿ ಮತ್ತು ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. 

ದೀರ್ಘಕಾಲದಿಂದ ಬೈಕ್ ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್‌ನ ಮೂಲವನ್ನು ಗೋಕಾಕ ಶಹರ  ಪೊಲೀಸ್ ಠಾಣೆಯ  PSI ಕಿರಣ ಮೋಹಿತೆ ಮತ್ತು ಪೊಲೀಸ್ ಸಿಬ್ಬಂದಿಗಳು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Leave a Reply

Your email address will not be published. Required fields are marked *

You missed

error: Content is protected !!