ಸಂಯುಕ್ತ ಟೈಮ್ಸ್, ಚಿಕ್ಕಮಗಳೂರು: 9ನೇ ತರಗತಿ ಓದುತ್ತಿದ್ದ 15 ವರ್ಷದ ಬಾಲಕಿ ಮೇಲೆ 52 ಜನ 5 ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಿಶೇಷ ಪೋಕ್ಸೋ ನ್ಯಾಯಾಲಯ ಆಕೆಯ ತಾಯಿ ಸೇರಿ ನಾಲ್ವರು ದೋಷಿಗಳೆಂದು ತೀರ್ಪು ನೀಡಿದೆ. ಸೋಮವಾರ ನಾಲ್ವರಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

15ರ ಅಪ್ರಾಪ್ತೆಯನ್ನ ಐದು ತಿಂಗಳಲ್ಲಿ 52 ಮಂದಿ ಅತ್ಯಾಚಾರ ಮಾಡಿದ್ದರು. ಆರಂಭದಲ್ಲಿ 17 ಜನರ ವಿರುದ್ಧ FIR ದಾಖಲು ಮಾಡಿದ್ದ ಶೃಂಗೇರಿ ಪೊಲೀಸರು ಆಮೇಲೆ ಒಬ್ಬರಾದ ಮೇಲೊಬ್ಬರಂತೆ ಆಕೆ ತಾಯಿ ಸೇರಿ 53 ಜನ ವಿರುದ್ಧ ಪ್ರಕರಣ ದಾಖಲಿಸಿ ದೋಷರೋಪಪಟ್ಟಿ ಸಲ್ಲಿಸಿದ್ದರು.
ಪ್ರತ್ಯೇಕ ದೂರುಗಳು ದಾಖಲಾದ ಕಾರಣ ಕಾರಣ 39 ಪ್ರಕರಣಗಳನ್ನ ದಾಖಲಾಗಿತ್ತು. ಸಾಕು ತಾಯಿಯೇ ತನ್ನ 15 ವರ್ಷದ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದಳು. ನ್ಯಾಯಾಲಯ ಮೂರು ವರ್ಷಗಳ ಕಾಲ ಪ್ರತಿಯೊಂದು FIRಅನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿತ್ತು. 53 ಜನರ ಪೈಕಿ 49 ಜನ ನಿರ್ದೋಷಿಗಳು. ಆದರೆ ಆಕೆ ತಾಯಿ ಗೀತಾ, ಆಕೆಯನ್ನ ಮೊದಲ ಬಾರಿಗೆ ಬಳಸಿಕೊಂಡ ಅಭಿ ಹಾಗೂ ಆಕೆಯನ್ನ ಬಲವಂತವಾಗಿ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಆ ಕೆಲಸಕ್ಕೆ ದೂಡಿದ ಗಿರೀಶ್ ಹಾಗೂ ದೇವಿಶರಣ್ ಎಂಬುವರು ದೋಷಿಗಳು ಎಂದು ತೀರ್ಮಾನಿಸಿದೆ.
ತನಿಖೆ ತಪ್ಪು ದಾರಿ ಹಿಡಿಯುತ್ತಿದೆ ಎಂದು ಎಂದು ಸ್ಥಳಿಯರು ಅಸಮಾಧಾನ ಹೊರಹಾಕಿದ್ದರಿಂದ 2021ರಲ್ಲಿ ಶೃಂಗೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ PSI ಕೀರ್ತಿಕುಮಾರ್ ಎತ್ತಂಗಡಿಯಾದರೆ CPI ಸಿದ್ರಾಮಪ್ಪ ಸಸ್ಪೆಂಡ್ ಆಗಿದ್ದರು. ASP ಶೃತಿ ತಿಂಗಳುಗಟ್ಟಲೇ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿ ತನಿಖೆ ನಡೆಸಿದ್ದರು.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕರಣ ಆಕೆಯನ್ನ ವೇಶ್ಯಾವಾಟಿಕೆಗೆ ದೂಡಿದವರು, ಆಕೆಯನ್ನ ಆ ಕೆಲಸಕ್ಕೆ ಪ್ರೇರೇಪಿಸುವುದು ಮಾತ್ರ ತಪ್ಪು ಎಂದು ತೀರ್ಮಾನಿಸಿದೆ. ಹಣ ನೀಡಿ ಗ್ರಾಹಕರಾಗಿ ಹೋಗುವುದು ತಪ್ಪಲ್ಲ. ಆದರೆ ಬಲವಂತವಾಗಿ, ಬೆದರಿಸಿ ಆ ಕೆಲಸ ಮಾಡಿಸುವುದು ತಪ್ಪು ಎಂದು ಕೋರ್ಟ್ ಕೃತ್ಯ ಮಾಡಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

