ಸಂಯುಕ್ತ ಟೈಮ್ಸ್, ಗೋಕಾಕ: ತಾಲ್ಲೂಕಿನ ಬಡಿಗವಾಡ ಗ್ರಾಮದಲ್ಲಿ ಲೋಕ ಕಲ್ಯಾಣಕ್ಕಾಗಿ ಶಿವನ ಜಟೆಯಲ್ಲಿರುವ ಗಂಗೆಯನ್ನೇ ಧರೆಗಿಳಿಸಿದ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಸರಳವಾಗಿ ಉಪ್ಪಾರ ಕುಲಬಾಂಧವರು ಆಚರಿಸಿದರು.

ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ, ಮಲ್ಲಿಕಾರ್ಜುನ ಚೌಕಶಿ, ಮಹರ್ಷಿ ಶ್ರೀ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಕ್ಕಪ್ಪ ಕಟ್ರಿ, ವಿಠಲ ಕಮತಿ, ಮಾರುತಿ ಕುಡ್ಡಗೋಳ, ಭೀಮಶಿ ಉಪ್ಪಾರ, ಮುಲ್ಲು ಸಂಪಗಾರ, ಸಂಜೀವ ಇದ್ಲಿ, ರಮೇಶ ಕುಡ್ಡಗೋಳ, ನಾರಾಯಣ ಕಟ್ರಿ, ಮಂಜು ಇದ್ದಿ, ಸಿದ್ಲಿಂಗ ಕಟ್ರಿ, ಧರೆಪ್ಪ ದುರದುಂಡಿ, ಭೀಮಶಿ ಕುಡ್ಡಗೋಳ, ಪವನ ಬಂಡಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

