ಸಂಯುಕ್ತ ಟೈಮ್ಸ್, ನವದೆಹಲಿ: ಬಿಜೆಪಿಯ ‘ಅಬ್ಕಿ ಬಾರ್, ಚಾರ್ ಸೌ ಪಾರ್’ ಕನಸು ನನಸಾಗುತ್ತದೆ ಎಂದು ಟುಡೇಸ್ ಚಾಣಕ್ಯ ಹೇಳಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್ಡಿಎ ಈ ಬಾರಿ 400ರ ಗಡಿಯನ್ನು ದಾಟುತ್ತದೆ ಎಂದು ಭವಿಷ್ಯ ನುಡಿದಿದೆ.

ಯಾವ ಪಕ್ಷಕ್ಕೆ ಎಷ್ಟು ಸೀಟಗಳು ಬರುತ್ತೆ:
ಬಿಜೆಪಿ 335 ± 15
ಎನ್ಡಿಎ 400 ± 15
ಕಾಂಗ್ರೆಸ್ 50 ± 11
INDIA 107 ± 11
ಇತರರು 36 ± 9
ಇಂಡಿಯಾ ಟುಡೆ ಸಮೀಕ್ಷೆ ಈ ಬಾರಿಗೆ ಎನ್ಡಿಎಗೆ 361-401, ಇಂಡಿಯಾ ಒಕ್ಕೂಟಕ್ಕೆ 131-166, ಇತರರಿಗೆ 8-20 ಸ್ಥಾನಗಳನ್ನು ನೀಡಿದೆ.
2009, 2014, 2019 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಟುಡೇಸ್ ಚಾಣಕ್ಯ ಬಹುತೇಕ ನಿಖರ ಭವಿಷ್ಯ ನುಡಿದಿತ್ತು. 2014ರ ಚುನಾವಣೆಯಲ್ಲಿ ಎನ್ಡಿಎ 340 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. ಫಲಿತಾಂಶ ಬಂದಾಗ ಬಿಜೆಪಿ 282, ಎನ್ಡಿಎ 336 ಸ್ಥಾನಗಳನ್ನು ಗೆದ್ದುಕೊಂಡಿತ್ತು.

