ಸಂಯುಕ್ತ ಟೈಮ್ಸ್, ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ ಆರೋಪಿಗಳು ಗಂಗಾ ಕಲ್ಯಾಣ ಯೋಜನೆಗೂ ಕನ್ನ ಹಾಕಿದ ವಿಚಾರ ಈಗ ತನಿಖೆಯಿಂದ ಬಹಿರಂಗವಾಗಿದೆ.

ಎಸ್ಸಿ ಮತ್ತು ಎಸ್ಟಿ ಸಮುದಾಯದ ಜಮೀನುಗಳಿಗೆ ಕೊಳವೆ ಬಾವಿ ತೆಗೆಯುವುದಕ್ಕೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಸರ್ಕಾರ ನಿರ್ದೇಶನ ಮತ್ತು ನಿಯಮದಂತೆ 43,333 ಕೋಟಿ ರೂ. ಹಣವನ್ನು ಗಂಗಾ ಕಲ್ಯಾಣ ಯೋಜನೆಗಾಗಿ ಮೀಸಲಾಗಿಡಲಾಗಿತ್ತು. ಆದರೆ ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಅಣತಿಯ ಮೇರೆಗೆ ಖಜಾನೆ ಅಧಿಕಾರಿಗಳು 43 ಕೋಟಿ ರೂ. ಹಣವನ್ನು ಕೂಡ ಯೂನಿಯನ್ ಬ್ಯಾಂಕ್ ಗೆ ವರ್ಗಾವಣೆ ಮಾಡಿದ್ದಾರೆ.
ಈ ಹಣವನ್ನು ವರ್ಗಾವಣೆ ಮಾಡುವಾಗ ಕೆಲವು ದಾಖಲಾತಿಗಳನ್ನು ನಕಲು ಮಾಡಿರುವುದು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ಕೂಡ ಈ ಅಕ್ರಮದಲ್ಲಿ ಭಾಗಿ ಆಗಿರುವುದು ಈಗ ತನಿಖೆಯಲ್ಲಿ ಬಹಿರಂಗವಾಗಿದೆ.

