Spread the love

ಸಂಯುಕ್ತ ಟೈಮ್ಸ್, ಗೋಕಾಕ:  ಕರ್ನಾಟಕ ಸರ್ಕಾರ ನೌಕರರಿಗಾಗಿ 7 ನೇ ವೇತನ ಆಯೋಗ ಜಾರಿ ತಂದ ನಿಮಿತ್ತ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೋಕಾಕ ತಾಲೂಕಾ ಶಾಖೆಯ ವತಿಯಿಂದ ಗೌರವಿಸಿ, ಅಭಿನಂದನೆ ಸಲ್ಲಿಸಲಾಯಿತು.

ಗೋಕಾಕನ ಹಿಲ್‌ ಗಾರ್ಡನ್‌ ಕಚೇರಿಗೆ ಆಗಮಿಸಿದ ಸಚಿವರಿಗೆ ಸನ್ಮಾನಿಸಿ, ಸಿಹಿ ಹಂಚ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬಿ. ಎ. ಕುಂಬಾರ ಜಿಲ್ಲಾಧ್ಯಕ್ಷರು , ಎಂ. ವಾಯ್. ಗೋಕಾರ ಜಿಲ್ಲಾ ಕಾರ್ಯದರ್ಶಿ, ಬಸವರಾಜ ಮುರಗೋಡ ಜಿಲ್ಲಾ ಕಾರ್ಯಾಧ್ಯಕ್ಷರು ಹಾಗೂ ಗೋಕಾಕ ತಾಲೂಕಾಧ್ಯಕ್ಷರು, ಬಿ. ಎಂ ಕೊಡ್ಲ್ಯಾಳ ರಾಜ್ಯ ಪರಿಷತ್ ಸದಸ್ಯರು, ಬಿ. ಎ. ಮಾಲದಿನ್ನಿ ಖಜಾಂಚಿ, ಕೃಷ್ಣಕುಮಾರ್ ಕಾರ್ಯದರ್ಶಿ , ಆನಂದ ಹಂಜ್ಯಾಗೋಳ ಮೂಡಲಗಿ ತಾಲೂಕಾಧ್ಯಕ್ಷರು , ರಾಮಚಂದ್ರ ಸಣ್ಣಕ್ಕಿ, ಅಶೋಕ ಮೇಸ್ತ್ರಿ, ಸುಮನ ಜಾಧವ , ರಮೇಶ ಕೋಲಕಾರ ಸಿ.ಆರ್.ಪಿ , ಎಸ್ . ಆರ್ ಮಜ್ಜಗಿ, ಗದಾಡಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!