ಸಂಯುಕ್ತ ಟೈಮ್ಸ್, ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಂಟೇನರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೀಜ್ ಮಾಡಿ 40 ಲಕ್ಷಕ್ಕೂ ಅಧಿಕ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಮಧ್ಯರಾತ್ರಿ 1 ಗಂಟೆ ವೇಳಗೆ ಗೋವಾದಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಕಂಟೇನರನಲ್ಲಿ ಅಕ್ರಮ ಮದ್ಯ ಇರುವುದು ಪತ್ತೆಯಾಗಿದೆ . ಅಬಕಾರಿ ಇಲಾಖೆ ಅಧಿಕಾರಿಗಳು ಸೀಜ್ ಮಾಡಿ 40 ಲಕ್ಷಕ್ಕೂ ಅಧಿಕ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಮಾಹಿತಿ ನೀಡಿದ ಅಬಕಾರಿ ಆಯುಕ್ತ ಮಂಜುನಾಥ್ ಮಧ್ಯರಾತ್ರಿ 1 ಗಂಟೆ ವೇಳಗೆ ಗೋವಾದಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಕಂಟೇನರ ಲಾರಿಯನ್ನು ನಮ್ಮ ಅಬಕಾರಿ ರಕ್ಷಕ ಬಸವರಾಜ ವಾಹನ ತಪಾಸಣೆ ಮಾಡಿದ್ದಾರೆ, ಈ ವೇಳೆ ಚಾಲಕ ಪರಾರಿ ಆಗಿದ್ದಾನೆ, ಅನುಮಾನಗೊಂಡ ವಾಹನ ತಪಾಸಣೆ ಮಾಡಿದಾಗ ನಕಲಿ ಮದ್ಯ ಇರುವುದು ತಿಳಿಯಿದೆ, ವಾಹನದಲ್ಲಿ 255 ಬಾಕ್ಸ್ ಗಳಲ್ಲಿ 3060 ಬಾಟಲಿಗಳನ್ನು ಸಾಗಿಸಲಾಗುತ್ತೀತು, ವಾಹನದ ಮೌಲ್ಯ 42 ಲಕ್ಷ ಹಾಗೂ ಮದ್ಯದ ಮೌಲ್ಯ 40 ಲಕ್ಷಕ್ಕೂ ಅಧಿಕ ಸೇರಿ ಒಟ್ಟು 84 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ವಾಹನವೂ ಮಹಾರಾಷ್ಟ್ರದ ಠಾಣಾ GST ಬಿಲ್ಲ ತೋರಿಸಲಾಗಿದೆ, ವಾಹನದಲ್ಲಿ ಮಧ್ಯದದಲ್ಲಿ ಪಾಸ್ಲಿಕ ಬಕೇಟಗಳನ್ನು ಸಾಗಾಟ ಮಾಡಲಾಗುತ್ತೀದೆ ಎನ್ನುವ ರೀತಿಯಲ್ಲಿ GST ಬಿಲ್ಲ ತಯಾರಿ ಮಾಡಿಕೊಂಡಿದ್ದರು ಎಂದು ಹೇಳಿದ್ದರು.

