Spread the love

ಸಂಯುಕ್ತ ಟೈಮ್ಸ್, ಗೋಕಾಕ: ತಾಲೂಕಿನ ನಲ್ಲಾನಟ್ಟಿ ಗ್ರಾಮ ಪಂಚಾಯತನ ನೂತನ ಉಪಾಧ್ಯಕ್ಷರಾಗಿ ಸಿದ್ರಾಮ ಕಲ್ಲಪ್ಪ ಆನೇಗೌಡ್ರ ಅವರು ಆಯ್ಕೆಯಾಗಿದ್ದಾರೆ.

ಈಗಾಗಲೇ ತೆರವಾಗಿದ್ದ ಉಪಾಧ್ಯಕ್ಷರ ಹುದ್ದೆಗೆ ಶುಕ್ರವಾರ 24-01-2025 ರಂದು ನಡೆದ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದಂತೆ ಗ್ರಾಮ ಪಂಚಾಯತನ ಸರ್ವ ಸದಸ್ಯರು ಸರ್ವಾನುಮತದಿಂದ ಬಸಳಿಗುಂದಿ ಗ್ರಾಮದ ಸಿದ್ರಾಮ ಆನೇಗೌಡ್ರ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದಾರೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಯಕ್ಸ೦ಬಿ, ಗ್ರಾಮ ಪಂಚಾಯತನ ಅಧ್ಯಕ್ಷೆ ರೇಖಾ ಕುರಿಯಾರ ಹಾಗೂ ಸರ್ವ ಗ್ರಾಮ ಪಂಚಾಯತ ಸದಸ್ಯರು ನೂತನ ಉಪಾಧ್ಯಕ್ಷ ಸಿದ್ರಾಮ ಆನೇಗೌಡ್ರ ಅವರನ್ನು ಸತ್ಕರಿಸಿ ಶುಭಾಶಯಗಳನ್ನು ಕೋರಿದರು. 

ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಸ೦ಬಿ, ಡಾ: ಮೋಹನ ಕಮತ, ಅಧ್ಯಕ್ಷೆ ರೇಖಾ ಕುರಿಯಾರ, ಪಿಡಿಒ ಗಣೇಶ ತೋಟಗಂಟಿ, ಕಾರ್ಯದರ್ಶಿ ಜ್ಯೋತಿ ಬಡ್ಡಿ, ಸಿದ್ರಾಮ ಕುಳ್ಳೂರ, ವಿಷ್ಣು ಕುಳ್ಳೂರ, ರಾಮಚಂದ್ರ ಕುಳ್ಳೂರ, ಅಡಿವೆಪ್ಪ ಎಂಟೆತ್ತಿನವರ, ಶಿವಾಜಿ ಅರಭಾವಿ, ತಮ್ಮಣ್ಣ ವಾಲೀಕಾರ,  ಭೀಮಶಿ ಪಾತ್ರೋಟ, ಹಾಲಪ್ಪ ಕುರಬನ್ನವರ, ನಾಗಪ್ಪ ಕುರಬನ್ನವರ, ರಾಯಪ್ಪ ವಾಲೀಕಾರ, ಬಸವರಾಜ ಪವಾರ, ಹೊನ್ನವ್ವ ಹರಿಜನ, ಭೀಮವ್ವ ಕುಳ್ಳೂರ, ನೀಲವ್ವ ಪಾತ್ರೋಟ, ಲಕ್ಕಪ್ಪ ಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

You missed

error: Content is protected !!