Spread the love

ಸಂಯುಕ್ತ ಟೈಮ್ಸ್, ವಿಜಯಪುರ:  ಭೀಮಾತೀರದ ಭಾಗಪ್ಪ ಹರಿಜನ ಹತ್ಯೆ ಪ್ರಕರಣದ ಹಂತಕರಾದ ಪಿಂಟ್ಯಾ ಅಗರಖೇಡ್ ಸೇರಿ ನಾಲ್ವರನ್ನು ಗಾಂಧಿಚೌಕ ಪೊಲೀಸರು ಬಂಧಿಸಿದ್ದಾರೆ.

A1 ಆರೋಪಿ ಪ್ರಕಾಶ ಅಲಿಯಾಸ್ ಪಿಂಟ್ಯಾ ಅಗರಖೇಡ್ (25), A2 ರಾಹುಲ್ ತಳಕೇರಿ (20), A3 ಗದಿಗೆಪ್ಪ ಅಲಿಯಾಸ್ ಮಣಿಕಂಠ ದನಕೊಪ್ಪ (27), A4 ಸುದೀಪ್ ಕಾಂಬಳೆ (23) ಬಂಧಿತ ಆರೋಪಿಗಳು.

SP ಲಕ್ಷ್ಮಣ ನಿಂಬರಗಿ, ASP ಶಂಕರ್ ಮಾರಿಹಾಳ, DySP ಬಸವರಾಜ್ ಎಲಿಗಾರ್, CPI ಪ್ರದೀಪ್ ತಳಕೇರಿ, PSI ರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಕೇವಲ 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಆರೋಪಿ ಪಿಂಟ್ಯಾ, 2024 ಅಕ್ಟೋಬರ್ 8ರಂದು ಬಾಗಪ್ಪನ ಶಿಷ್ಯನಿಂದ ಹತನಾಗಿದ್ದ ರವಿ ಅಗರಖೇಡ್‌ನ ತಮ್ಮ. ಪಿಂಟ್ಯಾ ಸೇರಿ ಬಂಧಿತರೆಲ್ಲರೂ ಗೆಳೆಯರಾಗಿದ್ದರು.

Leave a Reply

Your email address will not be published. Required fields are marked *

You missed

error: Content is protected !!