Spread the love

ಸಂಯುಕ್ತ ಟೈಮ್ಸ್, ಗೋಕಾಕ: ಬೆಳಗಾವಿ ಜಿಲ್ಲೆಯ ಗೋಕಾಕ ತಹಶೀಲ್ದಾರ ಕಚೇರಿಯಲ್ಲಿ SSY ಪಿಂಚಣಿ ಯೋಜನೆಯಡಿ ಕೋಟ್ಯಂತರ ರೂಪಾಯಿ ದುರ್ಬಳಕೆಯಾಗಿರುವುದಿದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿ ಇಬ್ಬರು ಗ್ರೇಡ್-2 ತಹಶೀಲ್ದಾರಗಳು , 7 ಗ್ರಾಮ ಆಡಳಿತ ಅಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷಕರು ಸೇರಿದಂತೆ ಒಟ್ಟು 11 ಜನರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ. 

ಗೋಕಾಕ ತಹಶೀಲ್ದಾರ ಕಚೇರಿಯ ಗ್ರೇಡ್-2 ತಹಶೀಲ್ದಾರಗಳಾದ ಎಸ್.ಟಿ.ಬೇಟಗೇರಿ ಮತ್ತು ಸಾಗರ ಕಟ್ಟಿಮನಿ, ಕಂದಾಯ ನಿರೀಕ್ಷಕ ಶಿವಾನಂದ ಹೀರೇಮಠ, ಗ್ರಾಮ ಆಡಳಿತ ಅಧಿಕಾರಿಗಳಾದ ತುಕಾರಾಮ ಪಮ್ಮಾರ, ವಿನಯ ತಳ್ಳಿ, ಎಂ.ಎಸ್‌. ಗಡಕರಿ, ಮಲ್ಲಿಕಾರ್ಜುನ ಹಂಚಿನಾಳ, ಸಿದ್ರಾಮ ಹಿಪ್ಪರಗಿ, ರಂಜಿತ ಚೌಹಾಣ, ಜಗದೀಶ ಚೂರಿ, ಬಸವರಾಜ ಕೆಂಚರಡ್ಡಿ ಲೋಕಾದಾಳಿಗೆ ಒಳಗಾಗಿದ್ದಾರೆ.

ಗೋಕಾಕ ತಾಲೂಕಿನ ವ್ಯಾಪ್ತಿಯಲ್ಲಿ ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಯಡಿ ಅರ್ಹರಿಗೆ ಪಿಂಚಣಿ ನೀಡದೇ ಲಂಚ ಪಡೆದು ಅನರ್ಹರಿಗೆ ಪಿಂಚಣಿ ಮಂಜೂರಾತಿ ನೀಡಿ ಸರ್ಕಾರದ ಖಜಾನೆಯ ಹಣ ದುರ್ಬಳಕೆಯಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಗುರುವಾರ 50 ಜನ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ಅಧಿಕಾರಿಗಳ ಮನೆಗಳ  ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.   ಈ ಸಂದರ್ಭದಲ್ಲಿ ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಯಡಿ 180 ಪ್ರಕರಣಗಳಲ್ಲಿ 59 ಲಕ್ಷ ರೂ. ಅವ್ಯವಹಾರ ಪತ್ತೆಯಾಗಿರುವುದು ಕಂಡುಬಂದಿದೆ.

ಬೆಳಗಾವಿ ಲೋಕಾಯುಕ್ತ SP ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಮತ್ತು ಲೋಕಾಯುಕ್ತ DySP ಬಿ. ಎಸ್. ಪಾಟೀಲ ಅವರ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ದಾಖಲೆಗಳಿಗಾಗಿ ತಲಾಶ ನಡೆಸಿ ತನಿಖೆಯನ್ನು ಮುಂದುವರಿಸಿದ್ದಾರೆ.

ಸಾರ್ವಜನಿಕರೊಂದಿಗೆ ಲಂಗುಲಗಾಮಿಲ್ಲದಂತೆ ವರ್ತಿಸುತ್ತಿದ್ದ  ಹಾಗೂ ಅಧಿಕಾರದ ಅಮಲಿನಲ್ಲಿದ್ದ ಕೆಲವು ಗೋಕಾಕ ಕಂದಾಯ ಅಧಿಕಾರಿಗಳಿಗೆ ಇದು ಲೋಕಾಯುಕ್ತ ಪೊಲೀಸರು ಬೀಸಿದ ಚಾಟಿ ಏಟಿನಂತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿವೆ.  ಲೋಕಾಯುಕ್ತ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  

Leave a Reply

Your email address will not be published. Required fields are marked *

You missed

error: Content is protected !!