ಸಂಯುಕ್ತ ಟೈಮ್ಸ್, ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಸ್ವಾಮೀಜಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಾಮುಕ ಸ್ವಾಮೀಜಿಯನ್ನ ಲೋಕೇಶ್ವರ ಸ್ವಾಮೀಜಿ ಎಂದು ಗುರುತಿಸಲಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದ ಮಠದ ಲೋಕೇಶ್ವರ ಸ್ವಾಮಿಜಿ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದ್ದು. ಮೂಡಲಗಿ ತಾಲೂಕಿನ ಅಪ್ರಾಪ್ತ ಬಾಲಕಿ ಸ್ವಾಮೀಜಿ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ. ಘಟನೆ ಸಂಬಂಧ ಸ್ವಾಮೀಜಿ ವಿರುದ್ದ POSCO ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನಲೆ:
ಸಂತ್ರಸ್ಥ ಬಾಲಕಿಯ ಕುಟುಂಬಕ್ಕೆ ಪರಿಚಿತನಾಗಿದ್ದ ಸ್ವಾಮೀಜಿ, ಆಗಾಗ ಸಂತ್ರಸ್ಥೆಯ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಮನೆಗೆ ಹೊರಟ್ಟಿದ್ದ ಬಾಲಕಿಯನ್ನು ನೋಡಿದ ಕಾಮುಕ ಸ್ವಾಮಿ “ನಿಮ್ಮ ಮನೆಗೆ ಹೊಗುತ್ತಿದ್ದೇನೆ ಬಾ” ಎಂದು ಹೇಳಿ ಕಾರು ಹತ್ತಿಸಿಕೊಂಡಿದ್ದ, ಆದರೆ ಮನೆ ಬಂದರೂ ಕಾರು ನಿಲ್ಲಿಸದೇ ಸ್ವಾಮೀಜಿ ಬಾಗಲಕೋಟೆ ಮೂಲಕ ರಾಯಚೂರಿನತ್ತ ಪ್ರಯಾಣ ಬೆಳೆಸಿದ್ದ.
ರಾಯಚೂರು ನಗರದ ಲಾಡ್ಜ್ಗೆ ಬಾಲಕಿಯನ್ನು ಕರೆದ್ಯೋಯ್ದು, ಲಾಡ್ಜ್ನಲ್ಲಿ ಬಾಲಕಿ ಮೇಲೆ ನಿರಂತರ ಅತ್ಯಾಚಾರವನ್ನು ಎಸಗಿದ್ದನು. ಅಲ್ಲಿಂದ ಬಾಲಕಿಯನ್ನು ಮಹಾಲಿಂಗಪುರ ಬಸನಿಲ್ದಾಣಕ್ಕೆ ಬಂದು ಬಿಟ್ಟು ಹೋಗಿದ್ದ ಸ್ವಾಮೀಜಿ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ಬಾಲಕಿಯನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದನು.
ಘಟನೆ ಬಗ್ಗೆ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದು. ಪೋಷಕರು ಕೂಡಲೇ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. POSCO ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

