Spread the love

ಸಂಯುಕ್ತ ಟೈಮ್ಸ್, ಬೆಂಗಳೂರು:  ಬಿಪಿಎಲ್ ಕಾರ್ಡ್ ಬೆನ್ನಲ್ಲೇ ಸರ್ಕಾರ ಈಗ ಸಂಧ್ಯಾ ಸುರಕ್ಷಾ ಅನರ್ಹ ಫಲಾನುಭವಿಗಳಿಗೆ ಕೊಕ್ ನೀಡಲು ಮುಂದಾಗಿದೆ. ಈಗಾಗಲೇ 23.19 ಲಕ್ಷ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಆಯುಕ್ತಾಲಯದಿಂದ ಎಲ್ಲಾ ಜಿಲ್ಲೆಗಳ ಡಿಸಿಗಳಿಗೆ ಪತ್ರ ಬರೆಯಲಾಗಿದೆ. ಅನರ್ಹರನ್ನು ಗುರುತಿಸಲು ಇಲಾಖೆಯಿಂದ ತಹಶೀಲ್ದಾರ್ ನೇತೃತ್ವದ ಟೀಮ್ ರಚನೆ ಮಾಡಲಾಗಿದೆ. ಸಂಯೋಜನೆ ಆಪ್ ಮೂಲಕ ಅನರ್ಹರ ಪತ್ತೆ ಪ್ರಕ್ರಿಯೆ ನಡೆಯಲಿದೆ. 

ಪ್ರಸ್ತಾವಿತ ಫಲಾನುಭವಿಗಳ ವಿವರಗಳನ್ನು ವಯಸ್ಸು, ಆದಾಯ, ರೇಷನ್ ಕಾರ್ಡ್ ವಿವರ, ಐಟಿ ವಿವರ ಈ ಮಾನದಂಡಗಳನ್ನು ಭೌತಿಕವಾಗಿ ಪರಿಶೀಲಿಸಲು ಸೂಚಿಸಲಾಗಿದೆ. ಕಚೇರಿಯ ಸೂಕ್ತ ನಿರ್ದೇಶನ ಪಾಲಿಸಲು ಸೂಚಿಸಲಾಗಿದೆ.

ಇನ್ನೂ ಇದರ ನಡುವೆಯೇ ನಿವೃತ್ತ ಸರ್ಕಾರಿ ನೌಕರರಿಗೆ ನಿವೃತ್ತಿ ಸೌಲಭ್ಯ ನೀಡಲು ಕಷ್ಟವಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಸಾಧ್ಯವಾಗ್ತಿಲ್ಲ. ಶಾದಿ ಮುಬಾರಕ್, ಕಲ್ಯಾಣ ಲಕ್ಷ್ಮಿ ಯೋಜನೆ ಅನುಷ್ಠಾನಕ್ಕೂ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. 

Leave a Reply

Your email address will not be published. Required fields are marked *

You missed

error: Content is protected !!