Spread the love

ಸಂಯುಕ್ತ ಟೈಮ್ಸ್, ಕಲಬುರಗಿ:  ಪತ್ನಿಯ ಜೊತೆ ಅನೈತಿಕ ಸಂಬಂಧ ಆರೋಪ ಹಿನ್ನೆಲೆ ಪ್ರಾಣ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮುರಡಿ ಗ್ರಾಮದಲ್ಲಿ ನಡೆದಿದೆ.

ಅಂಬರೀಶ್ (28) ಸ್ನೇಹಿತನಿಂದಲೇ ಕೊಲೆಯಾದ ಯುವಕ. ಅಜಯ್ ಹಾಗೂ ಆತನ ಸ್ನೇಹಿತರು ಕೊಲೆ ಮಾಡಿರುವ ಆರೋಪಿಗಳು. ಅಜಯ್ ಪತ್ನಿ ಜೊತೆ ಅಂಬರೀಶ್ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಅಜಯ್ ತನ್ನ ಹೆಂಡತಿ ಜೊತೆ ಇರುವಂತೆ ಹೇಳಿ ಕಲಬುರಗಿಯಿಂದ ಬೆಂಗಳೂರಿಗೆ ಹೋಗಿ ಅಂಬರೀಶ್‌ನನ್ನ ಕರೆತಂದಿದ್ದ. ಅಂಬರೀಶ್‌ನನ್ನು ಮುರಡಿ ಗ್ರಾಮಕ್ಕೆ ಕರೆತಂದ ಅಜಯ್, ಆತನ ಸ್ನೇಹಿತರ ಜೊತೆ ಸೇರಿ ವಯರನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ.

ಅಜಯ್ ಪೊಲೀಸರಿಗೆ ಕರೆ ಮಾಡಿ, ಸ್ನೇಹಿತನನ್ನೇ ಕೊಲೆ ಮಾಡಿರೋದಾಗಿ ಹೇಳಿದ್ದ. ನಂತರ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಅಜಯ್ ಶರಣಾಗಿದ್ದಾನೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!