ಸಂಯುಕ್ತ ಟೈಮ್ಸ್, ನವದೆಹಲಿ: ಕರ್ನಾಟಕದಲ್ಲಿರುವ ಒಟ್ಟು 6,291 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ 125 ಸಂಘಗಳು ದಿವಾಳಿ ಅಂಚಿನಲ್ಲಿವೆ ಎಂದು ಸಹಕಾರ ಸಚಿವ ಅಮಿತ್ ಶಾ ಮಂಗಳವಾರ ಲೋಕಸಭೆಗೆ ತಿಳಿಸಿದರು.

ರಾಯಚೂರು ಸಂಸದ ಜಿ.ಕುಮಾರ ನಾಯಕ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ಚಿಕ್ಕಬಳ್ಳಾಪುರದ 28 ಸಹಕಾರ ಸಂಘಗಳು, ಹಾಸನದ 13 ಮತ್ತು ಬೆಳಗಾವಿಯ 12 ಸಂಘಗಳು ಸೇರಿವೆ ಎಂದರು. 64 ಸಂಘಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ/ನಿಷ್ಕ್ರಿಯವಾಗಿವೆ ಎಂದರು.
ಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 428 ಸಂಘಗಳು ನೋಂದಣಿಯಾಗಿವೆ. ಬೆಳಗಾವಿಯಲ್ಲಿ (187) ಅತಿ ಹೆಚ್ಚು ಸಂಘಗಳು ನೋಂದಣಿ ಆಗಿದೆ. ಕಳೆದ ಐದು ವರ್ಷಗಳಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು ಕರ್ನಾಟಕದ ಸಂಘಗಳಿಗೆ 25.56 ಕೋಟಿ ರೂ. ವಿತರಿಸಿದೆ ಎಂದು ಹೇಳಿದರು.

