ಸಂಯುಕ್ತ ಟೈಮ್ಸ್, ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಕಾಕತಿ ಪೊಲೀಸರು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ದೀಪಾ ಅವಟಗಿ, ಶಿವಾನಂದ ಮಠಪತಿ, ಅಪ್ಪಯ್ಯ ಪೂಜಾರಿ, ಸುನಿಲ್ ವಿಭೂತಿ, ಸಚಿನ್ ಕುಮಾರ್ ಅಂಬಲಿ, ಭರತೇಶ್ ಅಗಸರ ಹಾಗೂ ಶಶಿಕುಮಾರ್ ದೊಡ್ಡನವರ್ ಎಂದು ತಿಳಿದುಬಂದಿದೆ.
ಡಿ. 18ರಂದು ಗೋಕಾಕ ಮೂಲದ ಸಿದ್ದಗೌಡ ಬಿರಾದರ ಎಂಬುವರು 7 ಜನರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ ಎರಡು ವಾಹನ ಹಾಗೂ 11 ಲಕ್ಷ ನಗದು ಹೀಗೆ ಒಟ್ಟು 22 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಕಾಕತಿ ಪೊಲೀಸರು ತಿಳಿಸಿದ್ದಾರೆ.

