Spread the love

ಸಂಯುಕ್ತ ಟೈಮ್ಸ್, ಬೈಲಹೊಂಗ: ಈಚೆಗೆ ನಡೆದಿದ್ದ ಮಹಿಳೆಯನ್ನು ಅರೆಬೆತ್ತಲಾಗಿಸಿ ಹಲ್ಲೆ ಮಾಡಿದ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ಇಂಥ ಅಮಾನವೀಯ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೈಲಹೊಂಗದಲ್ಲಿ ಬೆಳಕಿಗೆ ಬಂದಿದೆ.

ಮಹಿಳೆಯನ್ನು ಎರಡೆರಡು ಬಾರಿ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತ ಮಹಿಳೆಯು 20 ಮಂದಿ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಲ್ಲಪ್ಪ ಡೊಂಕನ್ನವರ್, ಅಡಿವೆಪ್ಪ ದಳವಾಯಿ, ಕಲ್ಪನಾ ಡೊಂಕನ್ನವರ್, ಸಾಧಿಕ್ ಬಾಳೇಶಿ, ಶಿವಬಸಪ್ಪ ಕರಡಿಗುದ್ದಿ, ಬಸವರಾಜ್ ಕರಡಿಗುದ್ದಿ, ಮಾರುತಿ ಮುದ್ದೆನ್ನವರ್, ಸೋಮಲಿಂಗ್ ರಾವಜಿ, ಸೋಮಲಿಂಗ ಹಾದಿಮನಿ, ಮಲ್ಲವ್ವ ಕರಡಿಗುದ್ದಿ, ಬಾಬು ಕಾಜಗಾರ, ಮಾಲತಿ ರಾವಜಿ, ಗಂಗವ್ವ ಕಾಜಗಾರ, ಶಾಂತವ್ವ ಸಂಗೊಳ್ಳಿ, ಈರವ್ವ ಕರಕನ್ನವರ್, ಹರುನ್ ಕಂಡುಗೋಳ, ತಿಗಡಿ ಗ್ರಾಪಂ ಉಪಾಧ್ಯಕ್ಷೆಯ ಪತಿ ಸೇರಿ ಒಟ್ಟು 18 ಜನರ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!