ಸಂಯುಕ್ತ ಟೈಮ್ಸ್, ಗೋಕಾಕ: ಭಗೀರಥ ಪೀಠದ ಪೀಠಾಧಿಪತಿ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಜಿಯವರು 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ ಹಾಗೂ ಶ್ರೀ ಉಪವೀರ ಜಗ್ಗುರು ವಿದ್ಯಾ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಮತ್ತು ಧಾರ್ಮಿಕ ಸಮಾರಂಭವು ಫೆಬ್ರುವರಿ 10 ಮತ್ತು 11ರಂದು ಹೊಸದುರ್ಗದ ಸುಕ್ಷೇತ್ರ ಬ್ರಹ್ಮವಿದ್ಯಾನಗರದಲ್ಲಿ ಜರುಗಲಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಸ್. ಎಮ್. ಹತ್ತಿಕಟಗಿ ಹೇಳಿದರು.

ಅವರು, ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಪಟ್ಟಾಭಿಷೇಕ ಹಾಗೂ ಸುವರ್ಣ ಮಹೋತ್ಸವದ ನಿಮಿತ್ಯ ಕರೇದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಚಿವರಾದ ಸತೀಶ ಜಾರಕಿಹೊಳಿ, ಡಿ ಸುಧಾಕರ, ಶಿವರಾಜ ತಂಗಡಗಿ, ಕೆ. ಎನ್. ರಾಜಣ್ಣ, ಮಧು ಬಂಗಾರಪ್ಪ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಸಚಿವರುಗಳು ಮತ್ತು ಮಠಾಧೀಶರು ಪಾಲ್ಗೊಳ್ಳಲಿದ್ದು ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಭಗೀರಥ ಪೀಠದ ಪೀಠಾಧಿಪತಿ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಜಿಯವರು ಮಾತನಾಡುತ್ತ, ಉಪ್ಪಾರವನ್ನು ಮೀಸಲಾತಿಗೆ ತರುವ ಉದ್ದೇಶದಿಂದ ಈ ಸಮಾರಂಭದಲ್ಲಿ ಸಮಾಜದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕುಲಶಾಸ್ತ್ರೀಯ ಅಧ್ಯಯನ ವರದಿಯು ಈ ವಾರದಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಲಿದ್ದು, ಆ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳಿಸುವಂತೆ ಮುಖ್ಯ ಮಂತ್ರಿಗಳು ಹಾಗೂ ಇತರೆ ಸಚಿವರುಗಳಿಗೆ ಒತ್ತಾಯಿಸಲಾಗುವದು.
ಈ ಪತ್ರಿಕಾಗೊಷ್ಠಿಯಲ್ಲಿ ಶ್ರೀ ಭಗೀರಥ ಉಪ್ಪಾರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಜಕಬಾಳ, ಉಪಾಧ್ಯಕ್ಷರು ಅಡಿವೆಪ್ಪ, ಕುಶಾಲ್ ಗುಡೆನ್ನವರ, ಮುಖಂಡರುಗಳಾದ ಭೀಮಪ್ಪ ಹಂದಿಗುಂದ, ವಿಠ್ಠಲ ಸವದತ್ತಿ, ಪರಸಪ್ಪ ಚುನನ್ನವರ, ಯಲ್ಲಪ್ಪ ದುರದುಂಡಿ, ಮಲ್ಲಿಕಾರ್ಜುನ ಚೌಕಾಶಿ , ಭರಮಣ್ಣ ಉಪ್ಪಾರ, ಯಲ್ಲಪ್ಪ ಹೆಜ್ಜೆಗಾರ ಗಂಗಾಧರ ಭಟ್ಟಿ, ಸಿದ್ದಪ್ಪ ಹಮ್ಮನವರ, ಬಸವರಾಜ ಆಯಟ್ಟಿ, ಮಾಯಪ್ಪ ತಹಶೀಲದಾರ, ಲಕ್ಷ್ಮಣ ಮಂಗಿ, ಸೇರಿದಂತೆ ಉಪ್ಪಾರ ಸಮಾಜದ ಯುವಕರು ಹಾಗೂ ಮುಖಂಡರುಗಳು ಇದ್ದರು.

