Spread the love

ಮ್ಯಾಕ್ಸ್‌ವೆಲ್ 2021ರಿಂದ RCB ತಂಡದಲ್ಲಿ ಮ್ಯಾಕ್ಸ್​ವೆಲ್​ ಮುಂದುವರಿದಿದ್ದು, ಸದ್ಯ ಬೆಂಗಳೂರು ಫ್ರಾಂಚೈಸಿ 14.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಕಳೆದ ಋತುವಿನಲ್ಲಿ ಮ್ಯಾಕ್ಸ್​ವೆಲ್​ 183.49 ಸ್ಟ್ರೈಕ್ ರೇಟ್‌ನಲ್ಲಿ 400 ರನ್ ಗಳಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್ ಸಿಕ್ಕಿದೆ. ಬೆಸ್ಟ್ ಫಾರ್ಮ್​​ನಲ್ಲಿ ಮುನ್ನುಗುತ್ತಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯಗೊಂಡಿದ್ದಾರೆ. ಬಿಗ್ ಬ್ಯಾಷ್ ಲೀಗ್ (BBL)ನಲ್ಲಿ ಆಡುವಾಗ ಮ್ಯಾಕ್ಸ್‌ವೆಲ್ ಕೈಗೆ ಗಾಯವಾಗಿದೆ.

ಬಿಗ್ ಬ್ಯಾಷ್ ಲೀಗ್ ನ 13ನೇ ಸೀಸನ್ ಗುರುವಾರದಿಂದ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಬ್ರಿಸ್ಬೇನ್ ಹೀಟ್ ತಂಡಗಳು ಮುಖಾಮುಖಿಯಾಗಿದ್ದವು. ಮ್ಯಾಕ್ಸ್‌ವೆಲ್ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡಿದ್ದರು. ಆದರೆ ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಅವರ ಕೈಗೆ ಗಾಯವಾಗಿದೆ.

ಇದರೊಂದಿಗೆ ಮುಂದಿನ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಆಡುವುದಿಲ್ಲ ಎಂದು ಮೆಲ್ಬೋರ್ನ್ ಸ್ಟಾರ್ಸ್ ತಿಳಿಸಿದೆ. ಪರ್ತ್ ಸ್ಕ್ಯಾಟರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡುವುದಿಲ್ಲ ಎನ್ನಲಾಗಿದೆ. ಮೆಲ್ಬೋರ್ನ್ ಸ್ಟಾರ್ಸ್ ಅವರ ಗಾಯದ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದೆ.

ಮ್ಯಾಕ್ಸ್​ವೆಲ್ ಗಾಯದ ಕುರಿತು ತಿಳಿಯುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ಬೇಗ ಗುಣಮುಖರಾಗಲಿ ಎಂದು ಕಾಮೆಂಟ್ಸ್ ಮಾಡ್ತಿದ್ದಾರೆ. ಗಾಯದ ತೀವ್ರತೆ ಹೆಚ್ಚಾಗಿದ್ದರೆ ಐಪಿಎಲ್‌ನಲ್ಲಿ ಆಡುವ ಅವಕಾಶ ಕಷ್ಟ ಸಾಧ್ಯ ಎನ್ನಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!