Spread the love

ಸಂಯುಕ್ತ ಟೈಮ್ಸ್, ಬೆಂಗಳೂರು: ವಿಧಾನಸೌಧದಲ್ಲಿ ಗುರುವಾರ ನಡೆದ ‘ಜನಸ್ಪಂದನ’ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ. ಸುಮಾರು 11 ಸಾವಿರ ಅರ್ಜಿಗಳು ಸ್ವೀಕಾರವಾಗಿದ್ದು, ಒಂದೇ ತಿಂಗಳಲ್ಲಿ ಜನರಿಗೆ ಪರಿಹಾರ ನೀಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಡೆಡ್‌ಲೈನ್ ನೀಡಿದ್ದಾರೆ.

ಮೊಟ್ಟ ಮೊದಲ ಬಾರಿಗೆ ವಿಧಾನಸೌಧದಲ್ಲಿ‌ ನಡೆದ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಜನರ ಸಮಸ್ಯೆ ಆಲಿಸಿದ ಸಿಎಂ ಸ್ಥಳದಲ್ಲಿ ಪರಿಹಾರ ಕೊಟ್ಟರು. ಉಳಿದ ಅರ್ಜಿಗಳಿಗೆ ಒಂದು ತಿಂಗಳಲ್ಲಿ ಪರಿಹಾರ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗ್ಗೆ 11:30 ಕ್ಕೆ ಪ್ರಾರಂಭವಾದ ಜನಸ್ಪಂದನ ಕಾರ್ಯಕ್ರಮ ಸಂಜೆ 4:30 ವರೆಗೆ ನಡೆಯಿತು. ಪ್ರತಿ ಇಲಾಖಾವಾರು ಕೌಂಟರ್‌ಗಳನ್ನ ಸಿದ್ದಪಡಿಸಲಾಗಿತ್ತು. ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಹೊತ್ತು ಜನರು ಕೌಂಟರ್‌ಗಳಲ್ಲಿ ಕೂತಿದ್ದರು. ಖುದ್ದು ಜನರ ಬಳಿ ಸಿಎಂ ತೆರಳಿ ಅರ್ಜಿ ಸ್ವೀಕಾರ ಮಾಡಿದರು. ಸಮಚಿತ್ತದಿಂದ ಎಲ್ಲರ ಸಮಸ್ಯೆ ಆಲಿಸಿದರು. 150 ಕ್ಕೂ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಟ್ಟರು. ಒಟ್ಟು 20 ಸಾವಿರಕ್ಕೂ ಹೆಚ್ಚು ಮಂದಿ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸುಮಾರು 11 ಸಾವಿರ ಅರ್ಜಿಗಳು ಸಮಸ್ಯೆ ಪರಿಹಾರಕ್ಕೆ ಸಲ್ಲಿಕೆಯಾದವು.

Leave a Reply

Your email address will not be published. Required fields are marked *

You missed

error: Content is protected !!