ಸಂಯುಕ್ತ ಟೈಮ್ಸ್, ಬೆಂಗಳೂರು: ಈ ಚಳುವಳಿ ರಾಜಕೀಯ ಚಳುವಳಿ ಅಲ್ಲ, ಇದು ರಾಜಕೀಯೇತರ ಚಳುವಳಿ. ಕರ್ನಾಟಕ, ಕನ್ನಡಿಗರ ಹಿತ ಕಾಯಲು ಮಾಡುತ್ತಿರುವ ಪ್ರತಿಭಟನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಪ್ರತಿಭಟನೆ ಯಾವುದೇ ಪಕ್ಷದ ವಿರುದ್ಧ ಅಲ್ಲ. ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂಬ ಕಾರಣಕ್ಕೆ ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಿರ್ಮಲಾ ಸೀತಾರಾಮನ್ ಮಾತು ಕೊಟ್ಟಂತೆ ನಡೆದುಕೊಂಡಿಲ್ಲ. 26 ಬಿಜೆಪಿ ಸಂಸದರು 26 ಎಂಪಿಗಳು ಬಾಯಿ ಬಿಟ್ಟಿಲ್ಲ. ಇಂದು ಮಾನ, ಮರ್ಯಾದೆ, ನಾಚಿಕೆ ಬಿಟ್ಟು ಬೆಂಗಳೂರಿನ ಗಾಂಧಿ ಪ್ರತಿಮೆ ಹತ್ತಿರ ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಇಷ್ಟು ಮೋಸ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಕರ್ನಾಟಕದಿಂದ ಕೇಳಿದ್ದೆವು. ಅದು ಕೇಂದ್ರ ಸರ್ಕಾರಕ್ಕೆ ಕೇಳಿಸಲಿಲ್ಲ. ಆ ಕಾರಣಕ್ಕೆ ಇಲ್ಲಿ ಕೂಗಿ ಹೇಳಲು ಬಂದಿದ್ದೇವೆ ಎಂದರು.

