Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಬಳಿ ಭಾನುವಾರ ಸಂಜೆ ಜನಪದ ಗಾಯಕ ಮಾಳು ನಿಪನಾಳ ಹಾಗೂ ಆತನ ಸಂಗಡಿಗರು ವಾಹನ ಚಲಾಯಿಸುವಂತೆ ಹೇಳಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ.

ಶೇಖರ ಹಕ್ಯಾಗೋಳ, ಅಶ್ವಿನಿ ಈರಗಾರ ಮತ್ತು ರೂಪ ಹಕ್ಯಾಗೋಳ ಅವರು ಮೋಟಾರ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಮಾಳು ನಿಪನಾಳ ಮತ್ತು ಅವರ ಸಂಗಡಿಗರು ದ್ವಿಚಕ್ರವಾಹನ ಚಲಾಯಿಸಿದರು. ಈ ಬಗ್ಗೆ ಮೂವರು ಆತನನ್ನು ಪ್ರಶ್ನಿಸಿದಾಗ, ಕುಡಿದ ಅಮಲಿನಲ್ಲಿದ್ದ ಮಾಳು ಮತ್ತು ಆತನ 10 ಮಂದಿ ಸಹಚರರು ಇದು ನಮ್ಮ ಊರು, ನೀವು ನಮಗೆ ಪ್ರಶ್ನೆ ಮಾಡುವ ಹಾಗಿಲ್ಲ. ನಮಗೆ ಹೇಗೆ ಇಷ್ಟಬರತ್ತೋ ಹಾಗೇ ಗಾಡಿ ಓಡಿಸುತ್ತೇವೆ. ಯಾರನ್ನಾದ್ರೂ ಕರೆಸೋದಿದ್ರೆ ಕರೆಸಿ ಅಂತ ಹೇಳಿದ್ದಾರಂತೆ. ಶೇಖರ, ಅಶ್ವಿನಿ ಮತ್ತು ರೂಪ ಅವರನ್ನು ಗಾಯಗೊಳಿಸಿ, ಮೈಮೇಲೆ‌ ಇದ್ದ ಒಡವೆಗಳನ್ನ ಹರಿದು ಹಾಕ್ಕಿದ್ದಾರಂತೆ.

ಶೇಖರ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಮಹಿಳೆಯೊಬ್ಬರ ಕೈಗೆ ಗಾಯವಾಗಿದೆ. ಹಲ್ಲೆಗೆ ಒಳಗಾದ ಗಾಯಾಳುಗಳು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತರು ಕೆರೂರು ಗ್ರಾಮದ ನಿವಾಸಿಗಳಾಗಿದ್ದು, ಕಲ್ಲೋಳಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ರಾಯಬಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!