ಸಂಯುಕ್ತ ಟೈಮ್ಸ್, ದಾವಣಗೆರೆ: ಚಾರ್ಜ್ಶೀಟ್ನಿಂದ ಹೆಸರುಗಳನ್ನು ಕೈ ಬಿಡಲು 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್ಐಯನ್ನು ಮಂಗಳವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್ಐ ಈರಣ್ಣ ಬಂಧನಕ್ಕೆ ಒಳಗಾದವರು.
ದಾವಣಗೆರೆಯ ಮಣಿಕಂಠಾಚಾರ್ಯ ಎಂಬುವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚಾರ್ಜ್ಶೀಟ್ನಲ್ಲಿದ್ದ ಮಣಿಕಂಠಾಚಾರ್ಯ ಅವರ ತಾಯಿ ಭಾಗಮ್ಮ ಆಚಾರ್ಯ ಮತ್ತು ಪತ್ನಿ ಅರ್ಚನಾ ಆಚಾರ್ಯ ಅವರಿಬ್ಬರ ಹೆಸರುಗಳ ಕೈ ಬಿಡಲು ಈರಣ್ಣ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

