Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಡಿ. 19ರಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬಿಜೆಪಿ ನಾಯಕ ಸಿ.ಟಿ. ರವಿ ನಿಂದಿಸಿದ ಆರೋಪ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಈ ನಡುವೆ ಸಿ.ಟಿ. ರವಿ ಆ ಪದ ಬಳಸಿದ್ದಾರೆ ಎನ್ನಲಾದ ವೀಡಿಯೋವೊಂದನ್ನ ಲಕ್ಷ್ಮೀ ಹೆಬ್ಬಾಳ್ಕರ್‌ ಬಿಡುಗಡೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಪರಿಷತ್‌ ಕಲಾಪದ ವೇಳೆ ಸಿ.ಟಿ. ರವಿ ಆ ಪದ ಬಳಸಿ ನಿಂದಿಸಿದ್ದಾರೆ ಎನ್ನಲಾದ ವೀಡಿಯೋವನ್ನ ಪ್ರಸಾರ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಸಿ.ಟಿ. ರವಿಯನ್ನು  ಕ್ಷಮಿಸುವ ಪ್ರಮೇಯ ಇಲ್ಲ, ಈ ಲಕ್ಷ್ಮೀ ಹೆಬ್ಬಾಳ್ಕರ್‌ ಯಾವತ್ತಿಗೂ ಕ್ಷಮಿಸಲ್ಲ, ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸಿಎಂ ಮತ್ತು ಸಭಾಪತಿ ಅವರು ತನಿಖೆ ಮಾಡಬೇಕು. ಆದಷ್ಟು ಬೇಗೆ ಎಫ್‌ಎಸ್‌ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಿ.ಟಿ, ರವಿಯವರೇ ನನಗೆ ಆ ಪದ ಬಳಸಿದ್ದೀರಿ, ಇಂತಹ ನೂರು ಸಿ.ಟಿ. ರವಿ ಬಂದ್ರೂ ನಾನು ಎದುರಿಸುತ್ತೇನೆ. ನನ್ನ ಬಳಿ ದಾಖಲೆ ಇವೆ, ಇಂದೇ ಬಿಡುಗಡೆ ಮಾಡ್ತೇನಿ. ನಿಮಗೆ ನಾಚಿಗೆ ಆಗಬೇಕು ಎನ್‌ಕೌಂಟರ್ ಅಂತೀರಾ? ಚಿಕ್ಕಮಗಳೂರಿಗೆ ಬಂದು ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ನೀವು ಅಂದ ಮಾತು ಅಂದ್ರೆ ಸುಮ್ಮನಿರ್ತೀರಾ? ಒಬ್ಬರೇ ಇದ್ದಾಗ ಕುಳಿತು ಯೋಚನೆ ಮಾಡಿ ಸಿ.ಟಿ. ರವಿ ಎಂದು ಹರಿಹಾಯ್ದರಲ್ಲದೇ, ಬಿಜೆಪಿಯಲ್ಲಿ ಯಾರಾದ್ರೂ ಒಬ್ಬರು ಕ್ಷಮೆ ಕೇಳಿದ್ರಾ? ಸಿ.ಟಿ. ರವಿನ ಮೆರವಣಿಗೆ ಮಾಡ್ತಾರೆ, ಇದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು.. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ? ದೇವರ ಹತ್ರ ಹೋಗಿ ನಿಂತ್ಕೊಳ್ತಿರಿ, ಒಬ್ಬ ಹೆಣ್ಮಗಳಿಗೆ ಈ ರೀತಿ ಮಾತನಾಡಿ, ರಾಜಾರೋಷವಾಗಿ ಓಡಾಡ್ತಿದ್ದೀರಿ ನಿಮಗೆ ನಾಚಿಗೆ ಆಗಬೇಕು. ಇದನ್ನು ಸುಮ್ಮನೆ ಬಿಡಲ್ಲ, ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!