ಸಂಯುಕ್ತ ಟೈಮ್ಸ್, ಘಟಪ್ರಭಾ: ಹಿರಿಯ ನಾಗರಿಕರನ್ನು ರಕ್ಷಣೆ ಮಾಡುವುದು ಹಾಗೂ ಹಿರಿಯ ನಾಗರಿಕರಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಲು ಘಟಪ್ರಭಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸದಾ ಸಿದ್ಧರಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ ಎಚ್.ಡಿ.ಮುಲ್ಲಾ ಅವರು ಹಿರಿಯ ನಾಗರಿಕರಿಗೆ ಅಭಯ ಹಸ್ತವನ್ನು ನೀಡಿದ್ದಾರೆ.

ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದಿನಾಂಕ 17/01/2025 ಸಾಯಂಕಾಲ ಶುಕ್ರವಾರದಂದು ಏರ್ಪಡಿಸಿದ್ದ ಹಿರಿಯ ನಾಗರಿಕರ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಸಭೆಯಲ್ಲಿ ಪೋಲಿಸ ಇನ್ಸ್ಪೆಕ್ಟರ ಎಚ್.ಡಿ. ಮುಲ್ಲಾ ಅವರು ಮಾತನಾಡಿ ಹಿರಿಯ ನಾಗರಿಕರಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಲು ಹಿರಿಯ ನಾಗರಿಕರ ಸಲಹೆ ಮತ್ತು ಸಹಕಾರ ಅಗತ್ಯ ಎಂದು ಅವರು ಹೇಳಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್. ಆರ್. ಕಣವಿ ಅವರು ಈ ಸಭೆಯಲ್ಲಿ ಮಾತನಾಡಿ ಹಿರಿಯ ನಾಗರಿಕರ ತೊಂದರೆಗಳನ್ನು ಮತ್ತು ಸಲಹೆಗಳನ್ನು ಆಲಿಸಿ ಪೊಲೀಸ್ ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಮಹಾಜನ, ಸುರೇಶ ಪಾಟೀಲ, ಈಶ್ವರ ಚೌಗಲಾ, ಪ್ರೊ ಕೆ. ಡಿ. ವಾಲಿಕಾರ, ಕಲ್ಲಪ್ಪ ಕೊಂಕಣಿ, ಅವರುಗಳು ಮಾತನಾಡಿ ಹಿರಿಯ ನಾಗರಿಕರ ಸಮಸ್ಯೆಗಳ ಕುರಿತು ಈ ಸಭೆಯಲ್ಲಿ ವಿವರಿಸಿದರು.
ಈ ಸಭೆಯಲ್ಲಿ ಶ್ರೀ ಎಸ್.ಎಚ್. ಗಿರಡ್ಡಿ, ಡಿ.ಎಂ.ದಳವಾಯಿ, ಶೌಕತ ಕಬ್ಬೂರ, ಶ್ರೀಕಾಂತ ಕುಲಕರ್ಣಿ, ಪಿ.ಎಲ್. ನಾಯಿಕ, ಕೆಂಪಣ್ಣಾ ತುಕ್ಕಾನಟ್ಟಿ, ಕೆ.ಪಿ.ಕಳ್ಳೀಮಠ, ರಾಮಣ್ಣ ದೇಮಣ್ಣವರ, ಎಂ.ಡಿ. ಅಸೋದೆ, ಆದಪ್ಪಾ ಮಗದುಮ್, ಈಶ್ವರ ರಾಜಾಪುರೆ, ಭರಮಣ್ಣಾ ಗಾಡಿವಡ್ಡರ, ಜಿ.ಎಸ್. ಕರ್ಪೂರಮಠ, ಬಸವರಾಜ ಹಟ್ಟಿಗೌಡರ ಮತ್ತು ಪೊಲೀಸ್ ಸಿಬ್ಬಂದಿಗಳಾದ ಬಿ.ಎಸ್. ನಾಯಿಕ, ರಾಜು ಧುಮಾಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

