Spread the love

ಸಂಯುಕ್ತ ಟೈಮ್ಸ್, ಗೋಕಾಕ: ಬಾರ ಮತ್ತು ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಘಟಪ್ರಭಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂವರು ಖದೀಮರು ಘಟಪ್ರಭಾ, ಹುಕ್ಕೇರಿ, ಸಂಕೇಶ್ವರ ಹಾಗೂ ರಾಯಭಾಗ ಠಾಣೆಗಳ ಹದ್ದಿನಲ್ಲಿ ವಿವಿಧ ಅಂಗಡಿಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಒಂದು ಮೋಟಾರ ಸೈಕಲ, ಕಳ್ಳತನ ಮಾಡಲು ಬಳಸಿದ್ದ ವಿವಿಧ ಸಾಮಗ್ರಿಗಳು ಸೇರಿದಂತೆ ಹಣ ಜಪ್ತಿ ಮಾಡಿ ಕಳ್ಳತನದ ಆರೋಪಿಗಳನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಘಟಪ್ರಭಾ ಪೊಲೀಸ ಠಾಣೆಯ PI ಹೆಚ್. ಡಿ. ಮುಲ್ಲಾ, PSIರವರುಗಳಾದ ಹೆಚ್. ಕೆ. ನರಳೆ, ಎಸ್. ಆರ್. ಕಣವಿ ಹಾಗೂ ಸಿಬ್ಬಂದಿಗಳಾದ ಆರ್. ಆರ್. ಗಿಡ್ಡಪ್ಪಗೋಳ, ಕೆ. ಆರ್. ಬಬಲೇಶ್ವರ, ಕೆ. ವೊಳ್ಕರ, ಬಿ. ಎಂ. ತಳವಾರ, ಆರ್. ಕೆ. ಧುಮಾಳೆ, ಬಿ. ಎಸ್. ನಾಯಕ, ಎಲ್. ಎಂ. ಪೂಜೇರಿ, ದುಂಡಪ್ಪ ವಾಲೀಕಾರ, ಎಲ್. ಎಲ್. ಚಿಕ್ಕೋಡಿ ಇವರೆಲ್ಲರೂ ಸದರಿ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದರು ಹೀಗಾಗಿ ಬೆಳಗಾವಿ SP ಭೀಮಾಶಂಕರ ಗುಳೇದ ಇವರು ಸರ್ವ ಸಿಬ್ಬಂದಿ ವರ್ಗಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!