ಸಂಯುಕ್ತ ಟೈಮ್ಸ್, ಗೋಕಾಕ: ಅಕ್ರಮವಾಗಿ ಜಮೀನನ್ನು ಬೇರೆಯವರ ಹೆಸರಿಗೆ 20 ಗುಂಟೆ ಜಮೀನು ಪರಭಾರೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಹಶೀಲ್ದಾರ ಮೋಹನ ಭಸ್ಮೆ ಸೇರಿದಂತೆ ಐವರ ವಿರುದ್ಧ FIR ದಾಖಲಾಗಿದೆ.

ಗೋಕಾಕ ತಾಲೂಕಿನ ಮಮದಾಪುರ ಗ್ರಾಮದ ಶ್ರೀಮತಿ ಸಂಗೀತ ಶಿವಾನಂದ ಬನ್ನೂರ ಎನ್ನುವವರಿಗೆ ಸೇರಿದ 4 ಎಕರೆ ಜಮೀನಲ್ಲಿ 20 ಗುಂಟೆ ಭೂಮಿಯನ್ನು ಶ್ರೀಮತಿ ಗುಲಾಬ ಕುಶಾಲಚಂದ ಓಸ್ವಾಲ್ ಎನ್ನುವವರಿಗೆ ಪರಭಾರೆ ಮಾಡಿದ ಆರೋಪ ಕೇಳಿ ಬಂದಿದೆ.
ಕಂದಾಯ ಅಧಿಕಾರಿಗಳು ಶ್ರೀಮತಿ ಗುಲಾಬ ಕುಶಾಲಚಂದ ಓಸ್ವಾಲ್ ನೀಡಿದ ಯಾವುದೊ ಆಮಿಷಕ್ಕೆ ಒಳಗಾಗಿ ಸರ್ವೇ ನಂಬರ್ 122/1 (1) 4 ಎಕರೆ ಪೈಕಿ 20 ಗುಂಟೆ ಜಾಗವನ್ನು ಪರಭಾರೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪ್ರಕರಣದ A1 ಆರೋಪಿ ಗುಲಾಬ್ ಓಸ್ವಾಲ್ ಹೆಸರಿಗೆ 20 ಗುಂಟೆ ಜಮೀನು ಪರಭಾರೆ ಮಾಡಲಾಗಿದೆ. ಗೋಕಾಕ ತಹಶೀಲ್ದಾರ ಮೋಹನ್ ಭಸ್ಮೆ A2 ಆರೋಪಿಯಾಗಿದ್ದಾರೆ. A3 ಕಂದಾಯ ನಿರೀಕ್ಷಕ ಎಸ್. ಎನ್. ಹಿರೇಮಠ, A4 ಗ್ರಾಮ ಲೆಕ್ಕಾಧಿಕಾರಿ ತುಕಾರಾಮ ಪಮ್ಮಾರ A5 ಲ್ಯಾಂಡ್ ಸರ್ವೆಯರ್ ಸಿ. ತಿಮ್ಮಯ್ಯ ಮೇಲೆ ಇದೀಗ ಕೇಸ್ ದಾಖಲಾಗಿದೆ.
ಮಮದಾಪುರ ಗ್ರಾಮದ ಶ್ರೀಮತಿ ಸಂಗೀತ ಶಿವಾನಂದ ಬನ್ನೂರ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು, ಹೀಗಾಗಿ ಗೋಕಾಕನ ದಿವಾನಿ ನ್ಯಾಯಾಲಯದ ಆದೇಶದ ಮೇರೆಗೆ ಮಾರ್ಚ್ 26ರಂದು ಬೆಳಗಾವಿ ಜಿಲ್ಲೆಯ ಗೋಕಾಕ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಐಪಿಸಿ 1860ರಡಿ ಸೆಕ್ಷನ್ 409, 418, 420, 423,427, 466, 468, 149ರ ಅಡಿಯಲ್ಲಿ ಕೇಸ್ ದಾಖಲಾಗಿದೆ.
FIR ಪ್ರತಿ ಇಲ್ಲಿದೆ ಗಮನಿಸಿ:




