Spread the love

ಸಂಯುಕ್ತ ಟೈಮ್ಸ್, ಗೋಕಾಕ: ತಾಲೂಕಿನ ಕೊಳವಿಯ ಗೋಕಾಕ ಶುಗರ್ಸ್ ಲಿಮಿಟೆಡ ಪ್ಯಾಕ್ಟರಿಯ ಗೋಡಾವನದಿಂದ 12 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸಾಮಾನುಗಳನ್ನು ಕಳ್ಳತನ ಮಾಡಿದ್ದ ಮೂವರು ಖದೀಮರ ಹೆಡೆಮುರಿ ಕಟ್ಟುವಲ್ಲಿ ಗೋಕಾಕ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ.

ಹೌದು, ದಿನಾಂಕ 14-04-2025 ರಂದು ಕೊಳವಿಯ ಗೋಕಾಕ ಶುಗರ್ಸ್ ಲಿಮಿಟೆಡ ಪ್ಯಾಕ್ಟರಿಯ ಗೋಡಾವನದ ಹಿಂದಿನ ಬಾಗಿಲನ್ನು ಮುರಿದು ಒಳಹೊಕ್ಕು ಸಾಮಾನುಗಳನ್ನು ಕಳ್ಳತನ ಮಾಡಿದ ಖದೀಮರನ್ನು ಗೋಕಾಕ ಗ್ರಾಮೀಣ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಳವಿ ಗ್ರಾಮ ಹದ್ದಿಯಲ್ಲಿಯ ಗೋಕಾಕ ಶುಗರ್ಸ್ ಲಿಮಿಟೆಡ್ ಕೊಳವಿ ಪ್ಯಾಕ್ಟರಿಯ ಗೋಡಾವನದಲ್ಲಿದ ಒಟ್ಟು 12,54,170 ರೂಪಾಯಿ ಮೌಲ್ಯದ ಸಾಮಾನುಗಳು ಕಳ್ಳತನ ಮಾಡಿದ್ದು ಈ ಕುರಿತು ಗೋಕಾಕ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದ ಪತ್ತೆ ಕುರಿತು ಗೋಕಾಕ DySP ಡಿ. ಎಚ್. ಮುಲ್ಲಾ ಅವರ ನಿರ್ದೇಶನದಂತೆ ಗೋಕಾಕ CPI ಸುರೇಶಬಾಬು ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದು, ಈ ತನಿಖಾ ತಂಡದಲ್ಲಿ  PSI ಕಿರಣ ಮೋಹಿತೆ ಸೇರಿದಂತೆ ಹಲವಾರು ಪೊಲೀಸ ಸಿಬ್ಬಂದಿಗಳು ಇದ್ದರು.

ತನಿಖಾ ತಂಡವು ಕೊಳವಿ ಗ್ರಾಮದ ಗೋಕಾಕ ಶುಗರ ಲಿಮಿಟೆಡ ಪ್ಯಾಕ್ಟರಿ ಕಳ್ಳತನ ಪ್ರಕರಣದ ತನಿಖೆ ಕೈಕೊಂಡು ದಿನಾಂಕ: 25-04-2025 ರಂದು ಮೂವರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಖದೀಮರು ಮತ್ತು ಇದರಲ್ಲಿ ಭಾಗಿಯಾಗಿ ಪರಾರಿಯಾಗಿರುವ ಆರೋಪಿಗಳು ಸೇರಿಕೊಂಡು ಶುಗರ್ ಪ್ಯಾಕ್ಟರಿಯ ಗೋಡಾವನದಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!