Spread the love

ಸಂಯುಕ್ತ ಟೈಮ್ಸ್, ಬೆಳಗಾವಿ:  ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಕಳೆದ ಭಾನುವಾರ ನಡೆದಿದ್ದ ತಾಯಿ ಮತ್ತು ಮಗನ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ನೇಣಿಗೆ ಶರಣಾಗಿದ್ದಾನೆ.

ಅಥಣಿ ತಾಲೂಕಿನ ಕೊಡಗಾನೂರ್ ಗ್ರಾಮದಲ್ಲಿ ಏಪ್ರಿಲ್ 13 ರಂದು ಚಂದ್ರವ್ವ ಈಚೇರಿ ಹಾಗೂ ವಿಠ್ಠಲ ಈಚೇರಿ ತಾಯಿ ಮಗನ ಕೊಲೆ ಮಾಡಿ ಆರೋಪಿಗಳು ಕಬ್ಬಿನ ಕದ್ದೆಯಲ್ಲಿ ಶವ ಎಸೆದು ಹೋಗಿದ್ದರು.

ಪೊಲೀಸರ ತನಿಖೆಗೆ ಹೆದರಿ ಶೇಗುನಶಿ ಗ್ರಾಮದ ಸುರೇಶ ರಾಮಪ್ಪ ಸವದತ್ತಿ (36) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಶೈಲ್ ಸಂಗಪ್ಪ ಹೊರಟ್ಟಿ (35) ಕೊಲೆ ಆರೋಪಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದಾನೆ. 

ಜೋಡಿ ಕೊಲೆ ಹಿನ್ನೆಲೆ ಶೇಗುಣಶಿ ಮೂಲದ ಇಬ್ಬರು ಆರೋಪಿಗಳ ತನಿಖೆ ಆರಂಭವಾದ ಹಿನ್ನೆಲೆ ಓರ್ವ ಆತ್ಮಹತ್ಯಗೆ ಶರಣಾಗಿದ್ದಾನೆ. ಒಬ್ಬ ಬಚಾವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

You missed

error: Content is protected !!