Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ಬೆಳಗಾವಿ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಶ್ರೀ ಜಿ.ಎಸ್. ಉಪ್ಪಾರ ಅವರ ನೇತೃತ್ವದಲ್ಲಿ ಭಗೀರಥ ಜಯಂತಿ ಜಿಲ್ಲಾ ಮಟ್ಟದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲು ಉಪ್ಪಾರ ಸಮಾಜದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಸಮುದಾಯದ ಎಲ್ಲ ಬಾಂಧವರಿಗೆ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸಿ, ಸಮಾಜದ ಶಕ್ತಿ ಪ್ರದರ್ಶಿಸಲು ಕರೆ ನೀಡಲಾಯಿತು. ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಹಲವಾರು ತಾಲೂಕುಗಳಿಂದ ಸಮಾಜದ ಮುಖಂಡರು ಸೇರಿದಂತೆ ಹಿರಿಯರಾದ ಶ್ರೀ ಶಿವಪುತ್ರಪ್ಪ ಜಕಬಾಳ ಮತ್ತು ಯಲ್ಲಪ್ಪ ಹೆಜ್ಜಗಾರ ಅವರು ಕಾರ್ಯಕ್ರಮ ಹೇಗೆ ಮಾಡಬೇಕು ಅನ್ನುವುದನ್ನು ಸಲಹೆ ನೀಡಿದರು. 

 ಇನ್ನು ಅನೇಕರು ಉಪಸ್ಥಿತರಿದ್ದು, ತಮ್ಮ ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ನೀಡಿ ತಮ್ಮ ಕಾಣಿಕೆಯನ್ನು ಸಹ ಸಲ್ಲಿಸಿದರು.  ದಿನಾಂಕ 11/05/2025 ರಂದು ಜಿಲ್ಲಾಡಳಿತ ಹಾಗೂ ಉಪ್ಪಾರ ಸಮಾಜದ ಎಲ್ಲ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಭಗೀರಥ ಜಯಂತಿಯಲ್ಲಿ ಸುಮಾರು 300 ಕ್ಕೂ ಹೆಚ್ಚು ಮಹಿಳೆಯರ ಕುಂಭ ಮೇಳದೊಂದಿಗೆ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕುಮಾರ ಗಂಧರ್ವ ಸಭಾ ಭವನ ತಲುಪುವುದು.

ಭಗೀರಥ ಜಯಂತಿ ನಿಮಿತ್ಯ ಉಪ್ಪಾರ ಸಮಾಜದ SSLC ಮತ್ತು PUC ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು, ಶೇ 80% ಮತ್ತು ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ತಮ್ಮ ಅಂಕ ಪಟ್ಟಿ ಜೆರಾಕ್ಸ್ ಪ್ರತಿಯೊಂದಿಗೆ ಬಂದು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕುಂಭಮೇಳದಲ್ಲಿ ಭಾಗವಹಿಸಬೇಕು.  ಕುಂಭದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಬೆಳಗಾವಿ ಜಿಲ್ಲಾ ಭಗೀರಥ ಜಯಂತಿ ಸಮೀತಿ ವತಿಯಿಂದ ಒಂದು ಸೀರೆ, ಒಂದು ಕುಂಭ, ಕಾಯಿ ಹೂವು ನೀಡಲಾಗುವುದು.

ಉಪ್ಪಾರ ಸಮಾಜದ ಬೆಳಗಾವಿ ಜಿಲ್ಲೆಯ ಮುಖಂಡರಾದ ಶಿವಪುತ್ರ ಜಕಬಾಳ, ಉದಯ ಇಡಗಲ್, ಯಲ್ಲಪ್ಪ ಹೆಜ್ಜಗಾರ, ಬಸವರಾಜ ಖಾನಪ್ಪನವರ, ಅಡಿವೆಪ್ಪ ಬಿಲಕುಂದಿ, ಕುಶಾಲ ಗುಡೆನ್ನವರ, ರೇವಪ್ಪ ದುರದುಂಡಿ, ಸೋಮು ತೊಳಿ, ಉಮಾ ಉಪ್ಪಾರ, ಬಿ.ಪಿ. ಮೆಲ್ಮಟ್ಟಿ, ವಿಷ್ಣು ಲಾತೂರ, ಏನ್. ಆರ್. ಲಾತೂರ, ಬಸವರಾಜ ತುಳಸಿಗೇರಿ, ಸಿದ್ದಪ್ಪ ಹಮ್ಮನವರ, ಉದಯ ಹುಣಕುಪ್ಪಿ, ಲಕ್ಷ್ಮೀ ಗೊಟೂರ, ಬುರ್ಲಿ CPI, ಲಕ್ಷ್ಮಣ ಘಾಟೀನ, ರಾಜು ದಳವಾಯಿ, ವಿನಾಯಕ ಮದಲಭಾವಿ, ಶ್ರೀಶೈಲ ಅಗ್ನೆಪ್ಪಗೋಳ, ಬಸವರಾಜ ಆಯಟ್ಟಿ, ಲಕ್ಷ್ಮಣ ಮಂಗಿ, ಹಾಗೂ ಇತರರು ಭಾಗವಹಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You missed

error: Content is protected !!