ಸಂಯುಕ್ತ ಟೈಮ್ಸ್, ಗೋಕಾಕ: ಗಂಟಲು ಬೇನೆ ಕಾಯಿಲೆಯ ಚಿಕಿತ್ಸೆಗಾಗಿ ಗೋಕಾಕನ ನಿಸರ್ಗ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ರಾಯಬಾಗ ತಾಲೂಕಿನ ಆಲಕನೂರ ಗ್ರಾಮದ 14 ವರ್ಷದ ಕುಮಾರಿ ಶೃತಿ ಕರೆಪ್ಪಾ ಚೌಗಲಾ ಎಂಬ ಬಾಲಕಿ ವೈದ್ಯರ ನಿರ್ಲಕ್ಷ್ಯತನದಿಂದ ಸಾವಿಗೀಡಾದ ದಾರುಣ ಘಟನೆ ನಡೆದಿದೆ.

ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಆಪರೇಷನ ಮಾಡುತ್ತೇವೆಂದು ಹೇಳಿ ನನ್ನ ಮಗಳ ಜೀವ ತೆಗೆದುಕೊಂಡಿದ್ದಾರೆ. ಮಗು ಸಾವನ್ನಪ್ಪಿದರೂ ಸಹ ನಿಮ್ಮ ಮಗಳ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ಹೇಳಿ ಚಿಕಿತ್ಸೆ ನೀಡಿದ ದಾಖಲಾತಿ ಇಲ್ಲದೇ ಬೆಳಗಾವಿ ಕೆಎಲ್ಇ ಆಸ್ಪತ್ರೆಯ ಗೇಟ್ ಹೊರಗಡೆ ನಿಲ್ಲಿಸಿ ಹೋಗುತ್ತಿದ್ದರು ಆಗ ಕೆಎಲ್ಇ ಆಸ್ಪತ್ರೆಯ ವೈದ್ಯರು ಈ ಬಾಲಕಿ ಮೃತವಾಗಿ 2 ಗಂಟೆಯಾಗಿದೆ ಎಂದು ಹೇಳಿದಾಗ ತಾಯಿ ಅಕ್ರಂದನ ಮುಗಿಲು ಮುಟ್ಟಿತು.
ಮೃತ ಮಗುವಿನ ತಾಯಿ ಬಾಳಿ ಬದುಕಬೇಕಾದ ನನ್ನ ಮಗುವಿನ ಸಾವಿಗೆ ನಿಸರ್ಗ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಗಂಭೀರ ಆರೋಪ ಮಾಡಿ ದಿನಾಂಕ: 18/05/2025 ರಂದು ಗೋಕಾಕ ಶಹರ ಪೋಲಿಸ್ ಠಾಣೆಯಲ್ಲಿ FIR ಕೂಡ ದಾಖಲಿಸಿದ್ದಾರೆ.
ನನ್ನ ಮಗಳಿಗೆ ಆದ ಪರಿಸ್ಥಿತಿ ಇನ್ಯಾವ ಮಕ್ಕಳಿಗೂ ಆಗಬಾರದು, ಇಂತಹ ಆಸ್ಪತ್ರೆಯನ್ನು ಮೇಲಾಧಿಕಾರಿಗಳು ತಕ್ಷಣ ಬಂದ ಮಾಡಿಸಬೇಕೆಂದು ಮೃತ ಬಾಲಕಿಯ ತಾಯಿ ಬೇಡಿಕೊಂಡಳು. ಇನ್ನು ಈ ಆಸ್ಪತ್ರೆಯಲ್ಲಿ ಆಯುಷ್ಮಾನ ಹೆಸರಲ್ಲಿ ಮಾಫಿಯಾ ನಡೆಯುತ್ತಿದೆ. ಇಲ್ಲಿ ಮಕ್ಕಳ ಜೀವ ತೆಗೆಯುತ್ತಿದ್ದಾರೆ ಇಂತವರಿಗೆ ಕಾನೂನು ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಆಕ್ರೋಶ ಹೊರಹಾಕಿದರು.
ಇತ್ತ ಕಡೆ ನಿಸರ್ಗ ಆಸ್ಪತ್ರೆಯ ವೈದ್ಯರು ನಮ್ಮ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ನ್ಯಾಯಾಲಯ ಎನು ಹೇಳುತ್ತದೆಯೊ ಅದಕ್ಕೆ ನಾವು ತಲೆಬಾಗಿಸುತ್ತೇವೆಂದು ಹೇಳಿದ್ದಾರೆ. ಪೊಲೀಸ ತನಿಖೆಯಿಂದಷ್ಟೇ ಈ ಬಾಲಕಿಯ ಸಾವಿಗೆ ನಿಖರ ಕಾರಣವೇನು ಎಂದು ತಿಳಿದುಬರಲಿದೆ.
FIR ಪ್ರತಿ:




