Spread the love

ಸಂಯುಕ್ತ ಟೈಮ್ಸ್, ಬೆಳಗಾವಿ:  ಅಂಗನವಾಡಿ ಸಹಾಯಕಿಯ ವರ್ಗಾವಣೆಗೆ 30 ಸಾವಿರ ರೂ. ಲಂಚ ಕೇಳಿದ್ದ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಪರಿಂಟೆಂಡೆಂಟ್ ಅಬ್ದುಲ ವಲಿ ಹಾಗೂ ಕಂಪ್ಯೂಟರ್ ಆಪರೇಟರ ಸೌಮ್ಯಾ ಬಡಿಗೇರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಅಧಿಕಾರಿಗಳು. ಇಬ್ಬರು ಸೇರಿಕೊಂಡು ಹುಕ್ಕೇರಿ ಮೂಲದ ಅಂಗನವಾಡಿ ಸಹಾಯಕಿ ಶಕುಂತಲಾ ಕಾಂಬ್ಳೆಯವರ ವರ್ಗಾವಣೆಗೆ 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಲಂಚದ ಬೇಡಿಕೆ ಕುರಿತು ಅಂಗನವಾಡಿ ಸಹಾಯಕಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಅಂಗನವಾಡಿ ಸಹಾಯಕಿಯಿಂದ ಅಧಿಕಾರಿಗಳು 15 ಸಾವಿರ ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ಆಗುತ್ತಿದ್ದಂತೆ ಕಂಪ್ಯೂಟರ ಆಪರೇಟರ ಸೌಮ್ಯಾ ಅಸ್ವಸ್ಥರಾಗಿದ್ದರು , ಕೊಡಲೇ ಎಚ್ಚೆತ್ತ ಲೋಕಾಯುಕ್ತ ಪೊಲೀಸರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿ ಮಾನವೀಯತೆಯನ್ನು ತೋರಿದ್ದಾರೆ.

15 ಸಾವಿರ ಲಂಚ ಸ್ವೀಕರಿಸಿದ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!