Spread the love

ಗೋಕಾಕ: ಕರದಂಟು ನಗರಿಯ ಗೋಕಾಕನ ಗ್ರಾಮದೇವತೆಯರ ಜಾತ್ರೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ASI ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶನಿವಾರ (ಜು.05) ನಡೆದಿದೆ.

ಹುಬ್ಬಳ್ಳಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ASI ಆಗಿ ಕರ್ತವ್ಯ ಸಲ್ಲಿಸುತ್ತಿದ್ದ ಎಲ್. ಜೆ. ಮೀರಾನಾಯಕ್ (56) ಮೃತ ದುರ್ದೈವಿ.

ಕಳೆದ ನಾಲ್ಕು ದಿನಗಳಿಂದ ಗೋಕಾಕ ಗ್ರಾಮದೇವಿ ಜಾತ್ರೆಗೆ ASI ಎಲ್. ಜೆ. ಮೀರಾನಾಯಕ ಅವರನ್ನು ಕರ್ತವ್ಯಕ್ಕೆಂದು ನಿಯೋಜನೆ ಮಾಡಲಾಗಿತ್ತು.

ಗೋಕಾಕ ಪಟ್ಟಣದ SC/ST ಬಾಲಕರ ಹಾಸ್ಟೆಲನಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಶನಿವಾರ ಮುಂಜಾನೆ ಅವರಿಗೆ ಹಠಾತ ಹೃದಯಾಘಾತ ಸಂಭವಿಸಿದೆ.

ತಕ್ಷಣವೇ ಜೊತೆಗಿದ್ದ ಸಹೋದ್ಯೋಗಿಗಳು ವೈದ್ಯಕೀಯ ನೆರವಿಗೆ ಧಾವಿಸಿದರೂ ಕೂಡ ಫಲಕಾರಿಯಾಗಿಲ್ಲ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಭೀಮಾಶಂಕರ ಗುಳೇದ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

You missed

error: Content is protected !!