Spread the love

ಸಂಯುಕ್ತ ಟೈಮ್ಸ್, ಬೆಳಗಾವಿ:   ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದ ದಿವಂಗತ ಸಂಗಪ್ಪಾ ಕಾಂಬಳೆ ಅವರ ಪುತ್ರರಾದ ಚಂದ್ರಕಾಂತ ಕಾಂಬಳೆ ಅವರಿಗೆ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚಿಗೆ ಜರುಗಿದ 14ನೇ ಘಟಿಕೋತ್ಸವದಲ್ಲಿ ಪಿ.ಎಚ್‌. ಡಿ ಪದವಿ ಪ್ರದಾನ ಮಾಡಲಾಯಿತು. 

“Studies on Interspecific Grafting in Solanaceous Vegetables (ವಿಭಿನ್ನ ಪಜಾತಿಯ ಸೊಲೇನೇಸಿ ತರಕಾರಿ ಬೆಳೆಗಳಲ್ಲಿ ಕಸಿ ಅಧ್ಯಯನ)” ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಡಾ. ಶಶಿಕಾಂತ ಎವೂರರವರ ಮಾರ್ಗದರ್ಶನದಲ್ಲಿ ರಚಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪ್ರಯುಕ್ತ ಘನ ಕರ್ನಾಟಕ ಸರಕಾರದ ರಾಜ್ಯಪಾಲರಾದ ಸನ್ಮಾನ್ಯ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಂದ್ರಕಾಂತ ಕಾಂಬಳೆ ಅವರನ್ನು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು. 

ಡಾ: ಚಂದ್ರಕಾಂತ ಕಾಂಬಳೆ ಅವರ ಕುಟುಂಬದ ಸದಸ್ಯರು, ಶಿಕ್ಷಕ ವೃಂದ ಮತ್ತು ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!