Spread the love

ಸಂಯುಕ್ತ ಟೈಮ್ಸ್,  ಬೆಂಗಳೂರು: ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಮೂವರು ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ NIA ವಿಶೇಷ ಕೋರ್ಟ್ ಆದೇಶ ನೀಡಿದೆ.‌

2020 ಆಗಸ್ಟ್ 12ರಂದು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಸಂಬಂಧ 187 ಆರೋಪಿಗಳನ್ನ NIA ಅಧಿಕಾರಿಗಳು ಬಂಧಿಸಿದ್ದರು. ಪ್ರತ್ಯೇಕ ಪ್ರಕರಣ ವಿಚಾರಣೆಯಲ್ಲಿ ಮೂವರು ಅಪರಾಧಿಗಳು ದೋಷಿಗಳೆಂದು NIA ಕೋರ್ಟ್ ತೀರ್ಪು ನೀಡಿದೆ. ಸೈದ್ ಇಕ್ರಾಮುದ್ದೀನ್, ಸೈಯದ್ ಆಸೀಫ್, ಮಹಮ್ಮದ್ ಆಸೀಫ್‌ಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಇನ್ನು ಅಪರಾಧಿಗಳು ನಿಷೇಧಿತ PFI ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರೆಂದು ಎನ್‌ಐಎ ತಮ್ಮ ವಾದದಲ್ಲಿ ಮಂಡನೆ ಮಾಡಿತ್ತು. ವಾದವನ್ನು ಒಪ್ಪಿದ ನ್ಯಾಯಾಲಯ ಆಪಾದಿತರಿಗೆ PFI ನಂಟಿದೆ ಎಂಬುದನ್ನು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. NIA ಪರವಾಗಿ ಹಿರಿಯ ವಕೀಲ ಪಿ. ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದ್ದರು.

Leave a Reply

Your email address will not be published. Required fields are marked *

You missed

error: Content is protected !!