Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನಿನ ಮಾಲಕನಿಗೆ ಪರಿಹಾರದ ಚೆಕ್ ನೀಡಲು 1 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿ ಆರೋಪದಡಿ ಬೆಳಗಾವಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಶಿರೂರ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

ಹೌದು, ರಾಯಬಾಗ ತಾಲ್ಲೂಕಿನ ಖೇಮಲಾಪುರ ಗ್ರಾಮದ ಯಾಸಿನ್ ಪೇಂಢಾರಿ ಅವರ 14 ಗುಂಟೆ ಜಮೀನನ್ನು ಮುಗಳಖೊಡ ಮತ್ತು ಹಾರೂಗೇರಿ ಪಟ್ಟಣಗಳಿಗೆ ಅಮೃತ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಹೀಗಾಗಿ ಸರಕಾರದಿಂದ ಮಂಜೂರಾದ 18 ಲಕ್ಷ ರೂ ಚೆಕನ್ನು ನೀಡಲು 1 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಳಗಾವಿ ವಿಭಾಗ ಬೆಳಗಾವಿ ಅಧಿಕಾರಿ EE ಅಶೋಕ್ ಶಿರೂರ ರವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಠಾಣೆ ಬೆಳಗಾವಿ ಯಲ್ಲಿ ದಿನಾಂಕ 17-10-2025 ರಂದು ಪ್ರಕರಣ ಸಂಖ್ಯೆ 16/2025 ಕಲಂ 7(a) ಭ್ರಷ್ಟಾಚಾರ ಕಾಯ್ದೆ ಅಡಿ PI ನಿರಂಜನ ಪಾಟೀಲ ಅವರು ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು.

ಈ ಬಗ್ಗೆ ಬೆಳಗಾವಿ ಲೋಕಾಯುಕ್ತ SP ಹಣಮಂತರಾಯ ಬೆಳಗಾವಿರವರ ಮಾರ್ಗದರ್ಶನದಲ್ಲಿ, DySPಗಳಾದ ಬಿ. ಎಸ್. ಪಾಟೀಲ್ ಮತ್ತು ಪುಷ್ಪಲತಾ ಅವರ ಸೂಚನೆಯಂತೆ EE ಅಶೋಕ ಶಿರೂರು ಅವರನ್ನು ದಿನಾಂಕ 27-10-2025 ರಂದು ಅವರ ಕಚೇರಿಯಲ್ಲಿ ತನಿಖಾಧಿಕಾರಿಯಾದ ನಿರಂಜನ ಪಾಟೀಲ ಮತ್ತು ಸಿಬ್ಬಂದಿಗಳು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಈ ಸಂದರ್ಭದಲ್ಲಿ ಸಹಾಯಕರಾಗಿ PI ಗೋವಿಂದಗೌಡ ಪಾಟೀಲ್ ಮತ್ತು ಸಿಬ್ಬಂದಿಗಳಾದ ರವಿ ಮಾವರ್ಕರ್, ಗಿರೀಶ್, ಶಶಿಧರ್, ಸುರೇಶ ಮತ್ತು ಮಲ್ಲಿಕಾರ್ಜುನ ಥೈಕರ ಸೇರಿದಂತೆ ಅನೇಕರು ಕಾರ್ಯನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!