Spread the love

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮ ಪಂಚಾಯತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಕಾರ್ಯದರ್ಶಿ ಮೌನೇಶ ದೇವೇಂದ್ರಪ್ಪ ಬಡಿಗೇರ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ಕೋರಲಾದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ಒದಗಿಸದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿ ರಾಜ್ಯ ಮಾಹಿತಿ ಆಯೋಗದ ಬೆಳಗಾವಿ ಪೀಠವು ಕಾರ್ಯದರ್ಶಿಗೆ 15 ಸಾವಿರ ದಂಡ ವಿಧಿಸಿ ಮತ್ತು ಅರ್ಜಿದಾರರಿಗೆ 5 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.

ಓಬಳಾಪುರ ಗ್ರಾಮದ ಮಾಹಿತಿ ಹಕ್ಕು ಬಳಕೆದಾರ ಮತ್ತು ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರು ಮಾಹಿತಿ ಹಕ್ಕು ಅಧಿನಿಯಮ  6 (1) ಮತ್ತು  7 (1) ರಡಿ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗೆ ಯಾವುದೇ ಉತ್ತರ ನೀಡದೇ ಇರುವುದರಿಂದ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.  

ಸುದೀರ್ಘವಾಗಿ ವಿಚಾರಣೆ ನಡೆಸಿದ ಮಾಹಿತಿ ಆಯೋಗವು ಕೋರಿದ ಮಾಹಿತಿಯನ್ನು ಅರ್ಜಿದಾರರಿಗೆ ನಿಗದಿತ ಸಮಯದಲ್ಲಿ ಒದಗಿಸದೇ,  ಉದ್ದೇಶಪೂರ್ವಕವಾಗಿ ಮಾಹಿತಿ ನೀಡದಿರುವುದು, ಆಯೋಗದ ವಿಚಾರಣೆಗೆ ಹಾಜರಾಗದೇ ಕಳ್ಳಾಟ ಮತ್ತು ಗೈರಾಗಲು ಯಾವುದೇ ಸಕಾರಣ ಲಿಖಿತ ಸಮಜಾಯಿಷಿಯನ್ನು ಸಲ್ಲಿಸದೇ ಇರುವುದನ್ನು ಮಾಹಿತಿ ಆಯೋಗ ಗಂಭೀರವಾದ ಮಾಹಿತಿ ಹಕ್ಕಿನ ಉಲಂಘನೆ ಎಂದು ಪರಿಗಣಿಸಿ ಬೆಳಗಾವಿ ಪೀಠದ ಮಾಹಿತಿ ಆಯೋಗವು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1) ಅಡಿಯಲ್ಲಿ ಕ್ರಮ ಜರುಗಿಸಿ ಕಾರ್ಯದರ್ಶಿ ಮೌನೇಶ ದೇವೇಂದ್ರಪ್ಪ ಬಡಿಗೇರ ಅವರಿಗೆ 15 ಸಾವಿರ ದಂಡ ವಿಧಿಸಿ ಮತ್ತು ಅರ್ಜಿದಾರರಾದ ಶ್ರೀನಿವಾಸಗೌಡ ಪಾಟೀಲ ಅವರಿಗೆ 5 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.

ಪ್ರಸ್ತುತವಾಗಿ ಮೌನೇಶ ಬಡಿಗೇರ ಅವರು ರಾಮದುರ್ಗ ತಾಲೂಕಿನ ಹೊಸಕೇರಿ ಗ್ರಾಮ ಪಂಚಾಯತಿಯಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ,  ಈ ಹಿಂದೆ ಅರ್ಜಿದಾರರು ಮಾಹಿತಿ ಕೋರಿ ಸಲ್ಲಿಸಿದ ಸಂದರ್ಭದಲ್ಲಿ ಮೌನೇಶ ಬಡಿಗೇರ ಅವರು ಓಬಳಾಪುರ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಮಾಹಿತಿ ಹಕ್ಕು ಅರ್ಜಿಗಳಿಗೆ ಸಾರ್ವಜನಿಕ ಮಾಹಿತಿಯ ಅಧಿಕಾರಿಗಳ ಬೇಜವಾಬ್ದಾರಿ, ಉದ್ದೇಶಪೂರ್ವಕವಾಗಿ ಮಾಹಿತಿ ನೀಡದಿರುವುದು ಮತ್ತು ಪಾರದರ್ಶಕತೆಯ ಕೊರತೆಯನ್ನು ಮತ್ತೆ ಸಾಭೀತುಪಡಿಸಿದೆ ಎಂದು ಮಾಹಿತಿ ಹಕ್ಕು ಬಳಕೆದಾರರು ಮತ್ತು ಸಾಮಾಜಿಕ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!