Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ಅಶ್ಲೀಲ, ಅಸಂಬಂದ್ಧ, ಮತ್ತು ಅಸಭ್ಯ ಹಾಡುಗಳ ಸಾಹಿತ್ಯ ರಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಾಡಿ ಜಾನಪದ ಹಾಡುಗಳೆಂದು ಬಿಂಬಿಸಿ ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ, ಸಾಮಾಜಿಕ ಸ್ವಾಸ್ಥ್ಯ, ಅಶಾಂತಿ ಉಂಟುಮಾಡಿ ಉತ್ತರ ಕರ್ನಾಟಕ ಸಂಸ್ಕೃತಿ ಹಾಳು ಮಾಡುತ್ತಿರುವ ಎಲ್ಲ ಸಾಹಿತ್ಯ ಬರಹಗಾರರ ಮತ್ತು ಹಾಡುಗಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರರಾದ ಶ್ರೀನಿವಾಸಗೌಡ ಪಾಟೀಲ ಅವರು ಸೋಮವಾರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಉತ್ತರ ವಲಯ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ, ವಿಜಯಪುರ ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿಯೂ ಸಹ ಸಾಮಾಜಿಕ ಸ್ವಾಸ್ಥ್ಯ, ಅಶಾಂತಿ ಸೃಷ್ಟಿಸುವ ಅಸಂಬಂದ್ಧ ಅಶ್ಲೀಲ ಮತ್ತು ಅಸಭ್ಯ ಹಾಡುಗಳನ್ನು ರಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಜಾತ್ರೆ, ಉತ್ಸವ, ಧಾರ್ಮಿಕ ಸಭೆಗಳಲ್ಲಿ ರಸಮಂಜರಿ ಕಾರ್ಯಕ್ರಮಗಳ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಮಾರಂಭ ಏರ್ಪಡಿಸಿ ಮಹಿಳೆಯರ ಘನತೆ, ಗೌರವಕ್ಕೆ ಚ್ಯುತಿ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಸಿ ತೇಜೋವಧೆ ಮಾಡಿ ಅಪರಾಧಿಕ ಭಯೋತ್ಪಾದನೆಗೆ ಪ್ರಚೋದನೆಯಾಗಿದ್ದು ಇದರಿಂದ ಯುವಜನತೆಯೂ ದಾರಿ ತಪ್ಪುತ್ತಾ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ದೂರಿದ್ದಾರೆ.

ಜಾನಪದ ಹೆಸರಿನಲ್ಲಿ ಅಶ್ಲೀಲ ಹಾಡುಗಳನ್ನು ಪ್ರಸಾರ ಫೇಸ್ಟುಕ್, ಯೂಟ್ಯೂಬಗಳಲ್ಲಿ ಈಗಾಗಲೇ ಪ್ರಸಾರ ಮಾಡಿದ ಎಲ್ಲರ ವಿರುದ್ಧ ಐ.ಟಿ.  ಕಾಯ್ದೆ 2000ರಡಿ ಪ್ರಕರಣ ದಾಖಲಿಸಬೇಕು. ಅಸಂಬಂದ್ಧ, ಅಶ್ಲೀಲ, ಅಸಭ್ಯ ಹಾಡುಗಳ ಸಾಹಿತ್ಯ ರಚನಾಕಾರರು, ಹಾಡುಗಾರರು ಮತ್ತು ಹಣ ನೀಡಿ ಹಾಡಿಸುವರು ಮತ್ತು ಸಮಾಜದ ಶಾಂತಿ ಕದಲುವ ವಿಕೃತ ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸಬೇಕು.  

ಜೊತೆಗೆ ಅನುಮತಿ ಇಲ್ಲದ್ದಿದ್ದರೂ ಸಹ ಟ್ರಾಕ್ಟರಗಳಲ್ಲಿ ಹಾಗೂ ಇತರೆ ವಾಹನಗಳಲ್ಲಿ ಅಕ್ರಮವಾಗಿ ಅಳವಡಿಸಿಕೊಂಡ  ಧ್ವನಿವರ್ಧಕಗಳಲ್ಲಿ ಅವೇ ಅಶ್ಲೀಲ, ಅಸಭ್ಯ ಹಾಡುಗಳನ್ನು ಹಚ್ಚಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವದರಿಂದ  ವಾಹನಗಳ ಶಬ್ದಮಾಲಿನ್ಯವು ವಿದ್ಯಾರ್ಥಿಗಳ, ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಆದ್ದರಿಂದ ತಕ್ಷಣವೇ ಅಧಿಕಾರಿಗಳು ಕೆಡಿಗೇಡಿಗಳ ವಿರುದ್ಧ ಕ್ರಮಕ್ಕೆ ಶ್ರೀನಿವಾಸಗೌಡ ಪಾಟೀಲ ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!