Spread the love

ಬೆಳಗಾವಿ:  ರಾಯಬಾಗ ತಹಶೀಲ್ದಾರ ಕಚೇರಿಯಲ್ಲಿ ಜಮೀನು ಪಹಣಿ ದಾಖಲೆಯಲ್ಲಿದ್ದ 15 ವರ್ಷಗಳ ಕಾಲ ಜಮೀನು ಹಸ್ತಾಂತರ ಮಾಡಬಾರದು ಎಂಬ ಷರತ್ತನ್ನು ತೆಗೆದುಹಾಕಲು ರೂ 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮಧ್ಯವರ್ತಿ ಮೂಲಕ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ SDA ಚಂದ್ರಮಪ್ಪ ಮೋರಟಗಿ ಮತ್ತು ಮಧ್ಯವರ್ತಿ ನಾಗೇಂದ್ರ ಕೃಷ್ಣಾ ಮಾರಾಸರ್ಕರ ಅವರುಗಳನ್ನು ಲಾಕ್ ಮಾಡಿದ್ದಾರೆ.

ಹೌದು, ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ರೈತನಾದ ಶಿವಾನಂದ ದುಂಡಗಿ ಅವರ ಅಜ್ಜನಿಗೆ ಸನ್ 1974 ರಲ್ಲಿ ಭೂ ನ್ಯಾಯಮಂಡಳಿ ಆದೇಶದಂತೆ ಮಂಜೂರಾದ ಜಮೀನನ್ನು ಕನಿಷ್ಠ 15 ವರ್ಷಗಳವರೆಗೆ ಪರಭಾರೆ ಮಾಡಬಾರದು ಎಂದು ಪಹಣಿಯಲ್ಲಿದ್ದ ನಿರ್ಬಂಧವನ್ನು ತೆಗೆದು ಆದೇಶ ಮಾಡಿ ಕೊಡುವಂತೆ ರಾಯಬಾಗ ತಹಶೀಲ್ದಾರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು,  ಸದರಿ ಅರ್ಜಿಯ ಮೇಲೆ ಕ್ರಮ ಜರುಗಿಸಿ, ತಹಶೀಲ್ದಾರ ರಾಯಬಾಗ ಅವರಿಂದ ಆದೇಶ ಮಾಡಿಸಿ ಕೊಡಲು ಕೇಸ ವರ್ಕರ್ ಚಂದ್ರಮಪ್ಪ ಮೋರಟಗಿ (SDA) ರವರು ರೂ 80 ಸಾವಿರ ಲಂಚ ಕ್ಕೆ ಬೇಡಿಕೆ ಇಟ್ಟಿದ್ದನು. 

ಈ ಬಗ್ಗೆ ಲಂಚ ನೀಡಲು ಮನಸಿಲ್ಲದೆ ಶಿವಾನಂದ ದುಂಡಗಿ ಅವರು ದಿನಾಂಕ 27-01-2026 ರಂದು ಕರ್ನಾಟಕ ಲೋಕಾಯುಕ್ತ ಬೆಳಗಾವಿ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಲೋಕಾಯುಕ್ತ SP ಮಲ್ಲೇಶ್ ಟಿ. ಅವರು ಭ್ರಷ್ಟಾಚಾರ್ ಕಾಯ್ದೆ ಅಡಿ ದೂರು ದಾಖಲಿಸಿಕೊಂಡು ನಂತರ ಮುಂದಿನ ತನಿಖೆ ಕೈಕೊಳ್ಳಲು PI ನಿರಂಜನ ಪಾಟೀಲರವರಿಗೆ ಆದೇಶಿಸಿದ್ದರು.  PI ನಿರಂಜನ ಪಾಟೀಲ ಮತ್ತು ಸಿಬ್ಬಂದಿಗಳು ದಿನಾಂಕ 27-01-2026 ರಂದು ಸಾಯಂಕಾಲ 5 ಗಂಟೆಗೆ ಕೇಸ ವರ್ಕರ್ ಚಂದ್ರಮಪ್ಪ ಮೋರಟಗಿ (SDA) ಅವರು ಶಿವಾನಂದ ದುಂಡಗಿ ಅವರಿಂದ ರೂ 80 ಸಾವಿರ ಲಂಚವನ್ನು ಮಧ್ಯವರ್ತಿಯಾದ ನಾಗೇಂದ್ರ ಕೃಷ್ಣಾ ಮಾರಾಸರ್ಕರ್ ಈತನ ಮೂಲಕ ಸ್ವೀಕರಿಸುವಾಗ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಲಂಚದ ಹಣದೊಂದಿಗೆ ಬಂಧಿಸಿದ್ದಾರೆ. 

ಲೋಕಾಯುಕ್ತ PIಗಳಾದ ಬಾಲಚಂದ್ರ ಲಕ್ಕಮ್ಮ, ಗೋವಿಂದಗೌಡ ಹಾಗೂ ಸಿಬ್ಬಂದಿಗಳಾದ ರವಿ, ರಾಜು, ಸಂತೋಷ, ಗಿರೀಶ್, ಅಭಿಜಿತ್, ಬಸವರಾಜ ಸೇರಿದಂತೆ ಅನೇಕರು ಈ ದಾಳಿಯಲ್ಲಿ ಭಾಗವಹಿಸಿರುತ್ತಾರೆ.

Leave a Reply

Your email address will not be published. Required fields are marked *

You missed

error: Content is protected !!