Spread the love

ಸಂಯುಕ್ತ ಟೈಮ್ಸ್, ನವದೆಹಲಿ: 60 ವರ್ಷದ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯನ್ನೇ ಕೊಂದು ಶವವನ್ನು ಬೆಡ್‌ರೂಮಿನಲ್ಲಿ ಬಚ್ಚಿಟ್ಟಿದ್ದ 31 ವರ್ಷದ ವ್ಯಕ್ತಿಯನ್ನ ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಆಶಾದೇವಿ ಕೊಲೆಯಾದ ಮಹಿಳೆ, 31 ವರ್ಷದ ದೇವೇಂದ್ರ ಅಲಿಯಾಸ್‌ ದೇವ್‌ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. 31 ವರ್ಷದ ದೇವೇಂದ್ರ 60 ವರ್ಷದ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯು ದೇವೇಂದ್ರ ಬೇರೋಬ್ಬಾಕೆ ವಿವಾಹವಾಗುವುದನ್ನು ತಡೆದಿದ್ದಕ್ಕೆ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಡಿಸಿಪಿ ಜಾಯ್ ಟಿರ್ಕಿ ಪ್ರಕಾರ, ಆರೋಪಿಯನ್ನು ಉತ್ತರ ಪ್ರದೇಶದ ಅಲಿಗಢದಲ್ಲಿ ಬಂಧಿಸಲಾಗಿದೆ. ಹತ್ಯೆಯಾದ ಐದು ದಿನಗಳ ನಂತರ ಶುಕ್ರವಾರ ಈಶಾನ್ಯ ದೆಹಲಿಯ ನಂದ ನಗರ ಪ್ರದೇಶದ ಅವರ ಮನೆಯಿಂದ ಆಶಾದೇವಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಆರೋಪಿ ದೇವೇಂದ್ರ 2015ರಲ್ಲಿ ಕೆಲಸ ಹುಡುಕಿಕೊಂಡು ಅಲಿಗಢಕ್ಕೆ ಬಂದು, ತಾಮ್ರದ ತಂತಿ ಪ್ಯಾಕಿಂಗ್‌ ಮಾಡುವ ಬಿಸಿನೆಸ್‌ ಆರಂಭಿಸಿದ್ದ. ಕೋವಿಡ್‌ ಕಾಲದಲ್ಲಿ ನಷ್ಟ ಅನುಭವಿಸಿದ್ದರಿಂದ 2 ವರ್ಷಗಳ ಕಾಲ ಉದ್ಯೋಗವಿಲ್ಲದೇ ಕುಳಿತಿದ್ದ. ಆದ್ರೆ ಜರ್ಮನಿಯಲ್ಲಿ ಓದುತ್ತಿರುವುದಾಗಿ ಹೇಳಿ ಅಲಿಗಢದಲ್ಲಿ ನೆಲೆಸಿರುವ ತಂದೆಯಿಂದ ಹಣ ಪಡೆದಿದ್ದ. ಹಣ ಹೊಂದಿಸಲು ಅವನ ತಂದೆ ತನ್ನ ಭೂಮಿಯನ್ನು ಮಾರಬೇಕಾಯಿತು ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ. 

ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಇದೇ ಡಿಸೆಂಬರ್‌ 5ರಂದು ಆಕೆಯ ಮನೆಯ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದುದ್ದನ್ನು ಗಮನಿಸಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಡ್‌ರೂಮಿನಲ್ಲಿದ್ದ ಬಾಕ್ಸ್‌ ತೆರೆದು ನೋಡಿದಾಗ ಆಶಾದೇವಿಯ ಛಿದ್ರಗೊಂಡ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!