Author: ಬಿ.ಎಲ್.ತಿಗಡಿ, ಸಂಪಾದಕರು ಸಂಯುಕ್ತ ಟೈಮ್ಸ್

ಚಿಕ್ಕಿಯಲ್ಲಿ ಹೆಚ್ಚು ಕೊಬ್ಬಿನಾಂಶ ಅಂಶ ಪತ್ತೆ:  ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಬಂದ ಮಾಡಿ ರಾಜ್ಯ ಸರ್ಕಾರ ಆದೇಶ

ಸಂಯುಕ್ತ ಟೈಮ್ಸ್, ಬೆಂಗಳೂರು: ಬಿಸಿಯೂಟ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಮಕ್ಕಳಿಗೆ ವಿತರಿಸುತ್ತಿದ್ದ ಚಿಕ್ಕಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿತರಣೆ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1 ರಿಂದ 10ನೇ ತರಗತಿ ಮಕ್ಕಳಿಗೆ…

ರೈತರಿಗೆ ಸಿಹಿ ಸುದ್ದಿ ನೀಡಿದ ಬೇಮೂಲ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ

ಸಂಯುಕ್ತ ಟೈಮ್ಸ್, ಗೋಕಾಕ: ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ವ್ಯಾಪ್ತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಕುಂದು ಕೊರತೆಗಳ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಫೆ. 21 ರಿಂದ ಪರಿಷ್ಕರಣೆ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ…

ಭೀಮಾತೀರದ ಭಾಗಪ್ಪ ಹರಿಜನ ಕೊಲೆ ಪ್ರಕರಣ:  24 ಗಂಟೆಗಳಲ್ಲಿ ನಾಲ್ವರು ಆರೋಪಿಗಳ ಬಂಧನ 

ಸಂಯುಕ್ತ ಟೈಮ್ಸ್, ವಿಜಯಪುರ:  ಭೀಮಾತೀರದ ಭಾಗಪ್ಪ ಹರಿಜನ ಹತ್ಯೆ ಪ್ರಕರಣದ ಹಂತಕರಾದ ಪಿಂಟ್ಯಾ ಅಗರಖೇಡ್ ಸೇರಿ ನಾಲ್ವರನ್ನು ಗಾಂಧಿಚೌಕ ಪೊಲೀಸರು ಬಂಧಿಸಿದ್ದಾರೆ. A1 ಆರೋಪಿ ಪ್ರಕಾಶ ಅಲಿಯಾಸ್ ಪಿಂಟ್ಯಾ ಅಗರಖೇಡ್ (25), A2 ರಾಹುಲ್ ತಳಕೇರಿ (20), A3 ಗದಿಗೆಪ್ಪ ಅಲಿಯಾಸ್…

ಕಳ್ಳರ ಹಾವಳಿಗೆ ತತ್ತರಿಸಿ ಒನಕೆ ಓಬವ್ವನ ಅವತಾರ ತಾಳಿದ ಮಹಿಳೆಯರು:  ರಾತ್ರಿಯಿಡಿ ಬಡಿಗೆ ಹಿಡಿದು ಗಸ್ತು

ಸಂಯುಕ್ತ ಟೈಮ್ಸ್, ಬಾಗಲಕೋಟೆ: ಮನೆಗಳ್ಳರ ಹಾವಳಿ‌ಗೆ ಬೇಸತ್ತ ಮಹಿಳೆಯರು ಒನಕೆ ಓಬವ್ವನ ಅವತಾರ ತಾಳಿ ಗಮನ ಸೆಳೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ‌ ಮುಧೋಳ ನಗರದಲ್ಲಿ ನಡೆದಿದೆ. ನಗರದ ಜಯನಗರ ನಿವಾಸಿಗಳೇ ಓಬವ್ವನ ರೂಪ ತಾಳಿದ ಮಹಿಳೆಯರು. ಕಳ್ಳರ‌ ಕಾಟದಿಂದ ಬೇಸತ್ತ ಮಹಿಳೆಯರು,…

ವಕೀಲರ ಸಂಘಗಳು ರಾಜಕೀಯ ವೇದಿಕೆಗಳಾಗಲು ಬಿಡುವುದಿಲ್ಲ: ಸುಪ್ರೀಂ ಕೋರ್ಟ್

ಸಂಯುಕ್ತ ಟೈಮ್ಸ್, ನವದೆಹಲಿ:  ವಕೀಲರ ಸಂಸ್ಥೆಗಳಲ್ಲಿ ಅಂಚಿನಲ್ಲಿರುವ ಸಮುದಾಯಗಳ ವಕೀಲರಿಗೆ ಮೀಸಲಾತಿ ಕೋರಿ ಕರ್ನಾಟಕದ ಕೆಲವು ವಕೀಲರು ಸಲ್ಲಿಸಿರುವ ಅರ್ಜಿ ಗಂಭೀರವಾದದ್ದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ನ್ಯಾ. ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ಪೀಠವು, ಬಾರ್…

ಸಕಲ ಸರಕಾರಿ ಗೌರವಗಳೊಂದಿಗೆ ಸ್ವ-ಗ್ರಾಮದಲ್ಲಿ ನೌಕಾ ಪಡೆ ಯೋಧ ಪ್ರವೀಣ ಖಾನಗೌಡ್ರಗೆ ಅಂತಿಮ ವಿದಾಯ

ಸಂಯುಕ್ತ ಟೈಮ್ಸ್, ಮೂಡಲಗಿ: ಕಳೆದ ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಗುಂಡು ತಗುಲಿ ಮರಣ ಹೊಂದಿದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರವೀಣ ಸುಭಾಸ ಖಾನಗೌಡ್ರ (24) ಅವರ ಅಂತ್ಯಕ್ರಿಯೆ ಶುಕ್ರವಾರದಂದು ಸ್ವ- ಗ್ರಾಮದಲ್ಲಿ…

ಕೊನೆಗೂ ಮೈಕ್ರೋಫೈನಾನ್ಸ್ ಕಿರುಕುಳ ತಡೆಯುವ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ: 3 ಮುಖ್ಯ ನಿಬಂಧನೆಯೊಂದಿಗೆ ಅನುಮೋದನೆ

ಸಂಯುಕ್ತ ಟೈಮ್ಸ್, ಬೆಂಗಳೂರು: ಕೊನೆಗೂ ಮೈಕ್ರೋಫೈನಾನ್ಸ್ ಕಿರುಕುಳ ತಡೆಯುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಒಪ್ಪಿಗೆ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಸರ್ಕಾರವು ರಾಜ್ಯಪಾಲರು ಎತ್ತಿದ್ದ ಎಲ್ಲ ಆಕ್ಷೇಪಣೆಗಳಿಗೆ ಸವಿವರಗಳೊಂದಿಗೆ ಸ್ಪಷ್ಟೀಕರಣ ಕೊಟ್ಟು ಸುಗ್ರೀವಾಜ್ಞೆ ಕರಡನ್ನು ಮತ್ತೆ ರಾಜಭವನಕ್ಕೆ ಕಳಿಸಿತ್ತು. ಇಂದು ರಾಜ್ಯಪಾಲರು ಸರ್ಕಾರಕ್ಕೆ…

ಗ್ಯಾರಂಟಿ ಯೋಜನೆಗಳಿಂದಾಗಿ ʻಪರಾವಲಂಬಿಗಳ ವರ್ಗʼ ಸೃಷ್ಟಿಸುತ್ತಿಲ್ಲವೇ :  ಸುಪ್ರೀಂ ಕೋರ್ಟ್ ಅಸಮಾಧಾನ

ಸಂಯುಕ್ತ ಟೈಮ್ಸ್, ನವದೆಹಲಿ:  ಚುನಾವಣೆಗೆ ಮುಂಚಿತವಾಗಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವ ಪದ್ಧತಿಯಿಂದ ನಾವು ʻಪರಾವಲಂಬಿಗಳ ವರ್ಗʼ ಸೃಷ್ಟಿಸುತ್ತಿಲ್ಲವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ನಗರ ಪ್ರದೇಶಗಳಲ್ಲಿ ನಿರಾಶ್ರಿತ ವ್ಯಕ್ತಿಗಳ ಆಶ್ರಯ ಹಕ್ಕಿನ ಕುರಿತಾದ ವಿಷಯವನ್ನು ನ್ಯಾಯಮೂರ್ತಿ ಬಿ.ಆರ್. ಗವಾಯಿ…

ಭಯಾನಕ ರ‍್ಯಾಗಿಂಗ್:  ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಡಂಬಲ್ಸ್ ನೇತು ಹಾಕಿ ಟಾರ್ಚರ್

ಸಂಯುಕ್ತ ಟೈಮ್ಸ್, ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ ಕಂಡು ಕೇಳರಿಯದಂತಹ ಭಯಾನಕ ರ‍್ಯಾಗಿಂಗ್ ನಡೆದಿದೆ. ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಕಿರಿಯ ವಿದ್ಯಾರ್ಥಿಗಳನ್ನು ಮೂರನೇ ವರ್ಷದ ಸೀನಿಯರ್‌ ವಿದ್ಯಾರ್ಥಿಗಳು ಬೆತ್ತಲೆ ಮಾಡಿ, ಮರ್ಮಾಂಗಕ್ಕೆ ಡಂಬಲ್ಸ್ ನೇತು ಹಾಕಿ ಟಾರ್ಚರ್ ನೀಡಿದ್ದಾರೆ.…

ಕ್ರಿಮಿನಲ್ ಕೇಸ್ ಇದ್ದರೆ ಉದ್ಯೋಗಕ್ಕೆ ಅನರ್ಹ, ಆದರೆ ಪ್ರಜಾಪ್ರತಿನಿಧಿಗಳಾಗಲು ಹೇಗೆ ಅರ್ಹರಾಗ್ತಾರೆ: ಸುಪ್ರೀಂ ಪ್ರಶ್ನೆ

ಸಂಯುಕ್ತ ಟೈಮ್ಸ್, ನವದೆಹಲಿ:  ಕ್ರಿಮಿನಲ್ ಕೇಸ್ ಇದ್ದರೆ ಉದ್ಯೋಗ ಮಾಡಲು ಸಹ ಅವರು ಅನರ್ಹ, ಆದರೆ ಅವರು ಪ್ರಜಾಪ್ರತಿನಿಧಿಗಳಾಗಲು ಹೇಗೆ ಅರ್ಹರಾಗ್ತಾರೆ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಈ ವಿಚಾರದಲ್ಲಿ ಚುನಾವಣಾ ಆಯೋಗ ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಅಪರಾಧ…

You missed

error: Content is protected !!