Spread the love

ಸಂಯುಕ್ತ ಟೈಮ್ಸ್, ಕಾರವಾರ: ಇಲ್ಲಿನ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ಮ್ಯಾನೇಜರ್‌ನಿಂದಲೇ 54 ಕೋಟಿ ರೂ. ಅವ್ಯವಹಾರ ನಡೆದಿದ್ದು, ಆತ ಅಪಘಾತದಲ್ಲಿ ಮೃತಪಟ್ಟು ವರ್ಷವಾದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.

ಬ್ಯಾಂಕ್ ಮ್ಯಾನೇಜರ್ ಗುರುದಾಸ್ ಬಾಂದೇಕರ್ ಎಂಬಾತ ಬ್ಯಾಂಕ್‍ನಲ್ಲಿದ್ದ ಹಣವನ್ನು ತನ್ನ ಪರಿಚಯಸ್ಥರು ಹಾಗೂ ಸಂಬಂಧಿಗಳ ಖಾತೆಗೆ ವರ್ಗಾವಣೆ ಮಾಡಿದ್ದ. ಅಲ್ಲದೇ ಪ್ರತಿವರ್ಷ ಆಡಿಟ್ ವೇಳೆ ಯಾರಿಗೂ ಗಮನಕ್ಕೆ ಬರದಂತೆ ವಂಚಿಸುತ್ತಿದ್ದ. ಇದೀಗ ಆಡಿಟ್ ಮಾಡುವಾಗ ಆತ ಎಸಗಿದ್ದ ವಂಚನೆ ಬೆಳಕಿಗೆ ಬಂದಿದೆ.

ಮ್ಯಾನೇಜರ್ ಮೃತಪಟ್ಟಿರುವುದರಿಂದ ವಂಚನೆಯ ವಿಚಾರದಲ್ಲಿ ಆಡಳಿತ ಮಂಡಳಿಗೆ ದೊಡ್ಡ ತಲೆಬಿಸಿ ಶುರವಾಗಿದೆ. ಇದೀಗ ಬ್ಯಾಂಕ್ ದಿವಾಳಿ ಎಂದು ಹೂಡಿಕೆ ಹಣ ಮರಳಿ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಗ್ರಾಹಕರ ಹಣಕ್ಕೆ ಯಾವುದೇ ತೊಂದರೆ ಇಲ್ಲವೆಂದು ಬ್ಯಾಂಕ್‍ನ ಆಡಳಿತ ಮಂಡಳಿ ಮನವಿ ಮಾಡಿದೆ.

ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಬ್ಯಾಂಕ್‍ನ ಆಡಳಿತ ಮಂಡಳಿ ದೂರು ದಾಖಲಿಸಿದೆ.

Leave a Reply

Your email address will not be published. Required fields are marked *

You missed

error: Content is protected !!