ಸಂಯುಕ್ತ ಟೈಮ್ಸ್, ನವದೆಹಲಿ: ಕೊವಾಕ್ಸಿನ್ ಲಸಿಕೆಯ ಸೈಡ್ ಎಫೆಕ್ಟ್ಸ್ ಗಳ ಬಗ್ಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ಕಳಪೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.

ಸಂಶೋಧನೆಗೆ ಯಾವುದೇ ಆರ್ಥಿಕ ಅಥವಾ ತಾಂತ್ರಿಕ ಬೆಂಬಲವನ್ನು ಒದಗಿಸಿಲ್ಲ. ಈ ಸಂಶೋಧನೆಯನ್ನು ಕಳಪೆಯಾಗಿ ತಯಾರಿಸಲಾಗಿದೆ ಎಂದು ಐಸಿಎಂಆರ್ ಡೈರೆಕ್ಟರ್ ಜನರಲ್ ರಾಜೀವ್ ಬಹ್ಲ್ ಹೇಳಿದ್ದಾರೆ. ಅಧ್ಯಯನ ವರದಿಯಲ್ಲಿ ಐಸಿಎಂಆರ್ ಹೆಸರನ್ನು ಬಳಸಿದ್ದನ್ನು ಕೂಡಲೇ ತೆಗೆದು ಹಾಕುವಂತೆ ಬಿಹೆಚ್ಯು ಸೂಚಿಸಿದೆ.

ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯ ಪಡೆದುಕೊಂಡಿರುವ ಮೂರನೇ ಒಂದರಷ್ಟು ಜನರಲ್ಲಿ ವರ್ಷದ ಬಳಿಕ ಸೈಡ್ ಎಫೆಕ್ಟ್ಸ್ ಗಳು ಕಾಣಿಸಿಕೊಂಡಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಅಧ್ಯಯನ ತಿಳಿಸಿತ್ತು. ಇದರ ಜೊತೆ ಜೊತೆಗೆ ಅಧ್ಯಯನದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಹೆಸರನ್ನು ಬಳಸಲಾಗಿತ್ತು.

