ಸಂಯುಕ್ತ ಟೈಮ್ಸ್, ಬೆಂಗಳೂರು: ಬೆಂಗಳೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ CPI ಹಾಗೂ PSI ಮೇಲೆ ಲೋಕಾಯುಕ್ತ ಪೊಲೀಸ್ರು ರೇಡ್ ಮಾಡಿ ಬಂಧಿಸಿದ್ದಾರೆ. ಕೆ ಆರ್ ಪುರದ CPI ವಜ್ರಮುನಿ ಹಾಗೂ PSI ರಮ್ಯಾ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು.

ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಶ್ರೀರಾಮ್ ಹಾಗು ಜಯಶೀಲ ಎಂಬುವರನ್ನು ವಶಕ್ಕೆ ಪಡೆಯಲಾಗಿತ್ತು. ವಂಚನೆ ಕೇಸ್ನ ಆರೋಪಿಗಳನ್ನು ಠಾಣೆಯಿಂದ ಬಿಟ್ಟು ಕಳುಹಿಸಲು 5 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. CPI ವಜ್ರಮುನಿ ಹಾಗೂ PSI ರಮ್ಯಾ, ತಲಾ 50 ಸಾವಿರ ಲಂಚದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಲಾಗಿದೆ.
ವಂಚನೆ ಕೇಸ್ನಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗಳನ್ನು ಬಿಡುಗಡೆ ಮಾಡಲು ಲಂಚ ಕೇಳಿದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಗುರುವಾರ 1 ಲಕ್ಷ ಹಣ ಕೊಡುವಾಗ ಲೋಕಾಯುಕ್ತರು ರೇಡ್ ಮಾಡಿ ಬಂಧಿಸಿದ್ದಾರೆ. ಒಂದು ವೇಳೆ ಹಣ ನೀಡದಿದ್ರೆ ಮತ್ತೆ ಅರೆಸ್ಟ್ ಮಾಡುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

