ಗೋಕಾಕ: ಘಟಪ್ರಭಾ ಪೊಲೀಸ್ ಠಾಣೆಯಿಂದ ಹೋಳಿ ಮತ್ತು ರಂಜಾನ ಹಬ್ಬಗಳ ಪ್ರಯುಕ್ತ ಶಾಂತಿ ಸಭೆಯನ್ನು ಘಟಪ್ರಭಾ ಪೊಲೀಸ್ ಠಾಣೆಯ ಸಭಾಭವನದಲ್ಲಿ ಇಂದು ಏರ್ಪಡಿಸಲಾಯಿತು.

ಈ ಸಭೆಯಲ್ಲಿ ಘಟಪ್ರಭಾ PI ಹೆಚ್. ಡಿ. ಮುಲ್ಲಾ ಅವರು ಮಾತನಾಡಿ ಹೋಳಿ ಮತ್ತು ರಂಜಾನ ಹಬ್ಬಗಳನ್ನು ಎಲ್ಲರೂ ಶಾಂತಿಯಿಂದ ಆಚರಿಸುವಂತೆ ಮನವಿ ಮಾಡಿದರು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಮುಖ್ಯವಾಗಿ ಈಗಾಗಲೇ PUC ಪರೀಕ್ಷೆಗಳು ಆರಂಭವಾಗಿವೆ, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚದಂತೆ ಸಾರ್ವಜನಿಕರಿಗೆ ಈ ಮೂಲಕ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

