Spread the love

ಸಂಯುಕ್ತ ಟೈಮ್ಸ್, ಬೆಂಗಳೂರು: ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಹೆಚ್.ಡಿ ಕುಮಾರಸ್ವಾಮಿ ಅವರಿಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದರು. ಬೆಂಗಳೂರಿನ ರಾಜಭವನದಲ್ಲಿ ಸೌಹಾರ್ದಯುತ ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡುವುದಾಗಿಯೂ ಅವರು ತಿಳಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನನ್ನ ವಿರುದ್ಧ ಏನೇನು ನಡೆಯುತ್ತಿದೆ ಅನ್ನೋದು ಗೊತ್ತಿದೆ. ನಾನು ಕೇಂದ್ರ ಮಂತ್ರಿ ಆಗಿರೋದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ನನ್ನನ್ನು ಜೈಲಿಗೆ ಹಾಕಿಸಬೇಕು ಅಂತ ಕಷ್ಟಪಡುತ್ತಿದ್ದಾರೆ. ಸರ್ಕಾರದವರು ಬಿಡದಿ ಜಮೀನು ದಾಖಲೆ ಹುಡುಕುತ್ತಿದ್ದಾರೆ. ಇದರಲ್ಲಿ ಎಲ್ಲರೂ ಸೇರಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪೊಲೀಸರೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ!


ವೈಯಕ್ತಿಕ ಕಾರಣದಿಂದ ಕೊಲೆ ಮಾಡುವುದು ರಾಜ್ಯದಲ್ಲಿ ಎಷ್ಟು ಸುಲಭವಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ನಡೆಯೇ ಕಾರಣ. ಪೊಲೀಸ್ ಅಧಿಕಾರಿಗಳೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಬರುವಾಗ ಕೊಟ್ಟು ಬಂದಿದ್ದನ್ನ ಸಂಪಾದನೆ ಮಾಡೋದಕ್ಕೆ ಹೀಗೆ ಮಾಡ್ತಿದ್ದಾರೆ. ಆಡಳಿತ ಸಂಪೂರ್ಣ ಕುಸಿದಿದೆ. ಶಾಮಿಯಾನ ಹಾಕೋ ಘಟನೆ ಇತಿಹಾದಲ್ಲಿ ಆಗಿರಲಿಲ್ಲ. ಯಥಾ ರಾಜಾ ತಥಾ ಪ್ರಜೆ ರೀತಿ ಈ ಸರ್ಕಾರದ ನಡವಳಿಕೆ ಆಗಿದೆ. ಈ ಸರ್ಕಾರಕ್ಕೆ ಏನಾದ್ರು ಕಿಂಚಿತ್ತೂ ಗೌರವ ಇದ್ದರೆ ಆಡಳಿತದಲ್ಲಿ ಸರಿಪಡಿಸಿಕೊಳ್ಳಲಿ ಎಂದು ತಿವಿದಿದ್ದಾರೆ.

ಬಿಎಸ್‌ವೈ ಪ್ರಕರಣದ ಕುರಿತು ಮಾತನಾಡಿ, ಸರ್ಕಾರ 4 ತಿಂಗಳ ನಡವಳಿಕೆ ಅನುಮಾನ ಇದೆ. ರಾಜ್ಯದ ಜನರೇ ಅನುಮಾನ ಪಡ್ತಿದ್ದಾರೆ. ಕಾನೂನು ಅರಿವು ಇರೋರು ಬಹಳ ಜನ ಈ ರಾಜ್ಯದಲ್ಲಿ ಇದ್ದಾರೆ. ಸಿಎಂ ಕೂಡ ವಕೀಲರಿದ್ದಾರೆ. ಆದರೂ ದ್ವೇಷದ ರಾಜಕೀಯ ಮಾಡ್ತಿದ್ದಾರೆ. ಇವರಿಗೆ ಯಾವ ನೈತಿಕ ಇದೆ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!