Spread the love

ಸಂಯುಕ್ತ ಟೈಮ್ಸ್, ಕಲಬುರಗಿ: ಇಲ್ಲಿನ ಶಾಲೆಯೊಂದರ ಮುಖ್ಯಶಿಕ್ಷಕಿ ವಿದ್ಯಾರ್ಥಿಗಳಿಂದ ಮನೆಗೆಲಸ ಹಾಗೂ ಶೌಚಾಲಯ ಶುಚಿಗೊಳಿಸುತ್ತಿದ್ದ ಆರೋಪ ಕೇಳಿಬಂದಿದ್ದು, ಶಾಲಾ ಮುಖ್ಯಶಿಕ್ಷಕಿ ವಿರುದ್ಧ FIR ದಾಖಲಾಗಿದೆ.

ಕಲಬುರಗಿಯ (Kalaburagi) ಮೌಲಾನ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಯೇ ಮುಖ್ಯಶಿಕ್ಷಕಿ ಜೋಹರಾ ಜಬೀನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಈ ಸಂಬಂಧ ಇಲ್ಲಿನ ರೋಜಾ ಪೊಲೀಸ್ ಠಾಣೆಯಲ್ಲಿ (Roza Police Station) ಪ್ರಕರಣ ದಾಖಲಾಗಿದೆ. 

ವಿದ್ಯಾರ್ಥಿ ಪೋಷಕರಾದ ಮೊಹಮ್ಮದ್ ಜಮೀರ್, ಶಾಲೆಯ ಮುಖ್ಯಶಿಕ್ಷಕರು ಶಾಲೆ ಮತ್ತು ಮನೆ ಕೆಲಸಗಳಿಗೆ ನನ್ನ ಮಗನನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಶಿಕ್ಷಕಿ ಜೋಹಾರ ಜಬೀನ್ ಅವರ ಮನೆಯಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನನ್ನ ಮಗನನ್ನು ಕೆಲಸಕ್ಕೆ ಬಳಸಿಕೊಂಡಿದ್ದರು. ಈ ವಿಷಯ ತಿಳಿದಾಗ ನಾನೇ ಖುದ್ದಾಗಿ ಶಾಲೆಗೆ ಹೋಗಿ ಮತ್ತೆ ರೀತಿ ಮಾಡದಂತೆ ಮನವಿ ಮಾಡಿದ್ದೆ. ಅದಾದರೂ ಹೆದರಿಸಿ, ಬೆದರಿಸಿ ನನ್ನ ಮಗನಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ನನ್ನ ಮಗ ಶಾಲೆ ಮುಗಿಸಿ ಪ್ರತಿದಿನ ಮನೆಗೆ ತಡವಾಗಿ ಬರುತ್ತಿದ್ದ, ಇದರಿಂದ ಅನುಮಾನಗೊಂಡು ಮುಖ್ಯಶಿಕ್ಷಕಿ ಮನೆಗೆ ಹೋಗಿ ನೋಡಿದಾಗ ಅಲ್ಲಿ ಮಗ ಮನೆಗೆಲಸ ಮಾಡುತ್ತಿದ್ದದ್ದು ಕಂಡುಬಂದಿತು. ತಕ್ಷಣವೇ ವಿದ್ಯಾರ್ಥಿ ತಂದೆ ಜಮೀರ್ 112 ಪೊಲೀಸರಿಗೆ ಕರೆ ದೂರು ನೀಡಿದೆ.

ಸದ್ಯ ವಿದ್ಯಾರ್ಥಿ ಮತ್ತು ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ರೋಜಾ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ

Leave a Reply

Your email address will not be published. Required fields are marked *

You missed

error: Content is protected !!