ಸಂಯುಕ್ತ ಟೈಮ್ಸ್, ಮೂಡಲಗಿ: ಅರಭಾವಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಇಂದು ಗುಜನಟ್ಟಿ ಗ್ರಾಮ ಪಂಚಾಯತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಶ್ರೀ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ ಮತ್ತು ಉಪಾಧ್ಯಕ್ಷರಾಗಿ ಸಾಮಾನ್ಯ ಮಹಿಳೆ ವರ್ಗದಿಂದ ಶ್ರೀಮತಿ ಲಕ್ಷ್ಮೀ ಮಂಜುನಾಥ ಹೇಳವರ ಅವರನ್ನು ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾ ಅಧಿಕಾರಿ ಶ್ರೀಮತಿ ಆರ್. ಪಿ. ನಾರಾಯಣಕರ ತಿಳಿಸಿದರು.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗುಜನಟ್ಟಿ ಗ್ರಾಮಸ್ಥರು ಹಾಗೂ ಮುಖಂಡರು ಸತ್ಕರಿಸಿ, ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಗುಜನಟ್ಟಿ ಗ್ರಾಮ ಪಂಚಾಯತನ ಪಿಡಿಒ ಶ್ರೀ ರವಿ ಮರೆನ್ನವರ, ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರಾದ ಶ್ರೀ ಗುರುನಾಥ ಗಂಗಣ್ಣವರ, ಮುಖಂಡರಾದ ಶ್ರೀ ರಾಮಪ್ಪ ಅರಭಾವಿ, ಶ್ರೀ ಶಂಭುಲಿಂಗ ಮುಕ್ಕಣ್ಣವರ, ಶ್ರೀ ಭೀಮಪ್ಪ ನಾವಿ, ಶ್ರೀ ಲಕ್ಷ್ಮಣ್ ಬಂಡ್ರೋಳಿ, ಶ್ರೀ ಶಿವಪುತ್ರ ಬಂಡಿನವರ, ಶ್ರೀ ಗುಂಡೂರಾವ್ ಗುಜನಟ್ಟಿ, ಶ್ರೀ ಹನುಮಂತ ರೋಡಲಕ್ಕನವರ, ಶ್ರೀ ವೆಂಕಪ್ಪ ಶಿರಗನ್ನವರ, ಶ್ರೀ ಮಂಜುನಾಥ್ ಹೇಳವರ ಹಾಗೂ ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

